ಕರ್ನಾಟಕ

karnataka

ETV Bharat / state

ಕುಷ್ಟಗಿ: ಆಸ್ಪತ್ರೆಯಲ್ಲಿ ಕೋವಿಡ್​ ಚಿಕಿತ್ಸೆ ನಿರಾಕರಿಸಿ ಊರಿಗೆ ಮರಳಿದ ವೃದ್ಧೆ! - ಕುಷ್ಟಗಿ ಕೋವಿಡ್​ ನ್ಯೂಸ್​

65 ವರ್ಷದ ವೃದ್ಧೆಗೆ ಈ ಆಸ್ಪತ್ರೆಯಲ್ಲಿ ಒಬ್ಬಂಟಿಯಾಗಿ ಚಿಕಿತ್ಸೆ ಪಡೆಯಲು ಇಷ್ಟವಿರಲಿಲ್ಲ. ಈ ಹಿನ್ನೆಲೆಯಲ್ಲಿ ಮನೆಯವರು ಹೋಮ್ ಐಸೋಲೇಷನ್​ಗೆ ಒಪ್ಪಿದ್ದರಿಂದ ನಾವು ಅನುಮತಿ ನೀಡಿದ್ದೇವೆ ಎಂದು ಪ್ರಭಾರ ವೈದ್ಯಾಧಿಕಾರಿ ಡಾ. ಶರಣು ಮೂಲಿಮನಿ ಅವರು 'ಈಟಿವಿ ಭಾರತ'ಕ್ಕೆ ತಿಳಿಸಿದ್ದಾರೆ.

woman refused to take covid treatment in hospital
ಕುಷ್ಟಗಿ: ಆಸ್ಪತ್ರೆಯಲ್ಲಿ ಕೋವಿಡ್​ ಚಿಕಿತ್ಸೆ ನಿರಾಕರಿಸಿದ 65 ವರ್ಷದ ವೃದ್ಧೆ

By

Published : Sep 2, 2020, 12:24 PM IST

Updated : Sep 2, 2020, 1:03 PM IST

ಕುಷ್ಟಗಿ(ಕೊಪ್ಪಳ):ತಾಲೂಕು ಸರ್ಕಾರಿ ಆಸ್ಪತ್ರೆಯ ಡೆಡಿಕೇಟೆಡ್ ಕೋವಿಡ್ ಹೆಲ್ತ್ ಕೇರ್ ಸೆಂಟರ್​ನಲ್ಲಿ ದಾಖಲಾಗಿದ್ದ ವೃದ್ಧೆ ಚಿಕಿತ್ಸೆ ನಿರಾಕರಿಸಿ ಮನೆಗೆ ತೆರಳಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ.

ತಾಲೂಕಿನ ಮೀಯಾಪೂರ ಗ್ರಾಮದ ವೃದ್ಧೆಯೋರ್ವರಿಗೆ ಕೋವಿಡ್ ದೃಢಪಟ್ಟ ಹಿನ್ನೆಲೆ ಕಳೆದ ಮೂರು ದಿನಗಳಿಂದ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಆದರೆ ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ನಿರಾಕರಿಸಿದ್ದಾರೆ. ವೈದ್ಯರು ಕುಟುಂಬದವರಿಗೆ ಇನ್ನೂ ಕೆಲವು ದಿನ ಈ ಆಸ್ಪತ್ರೆಯಲ್ಲಿರಲು ಎಷ್ಟೇ ಮನವೊಲಿಸಿದರೂ ಪ್ರಯೋಜನವಾಗಲಿಲ್ಲ. ವೈದ್ಯರೊಂದಿಗೆ ವಾಗ್ವಾದಕ್ಕೆ ಇಳಿದಿದ್ದ ಸಂಬಂಧಿಕರು ಆಸ್ಪತ್ರೆಯಲ್ಲಿ ಚಿಕಿತ್ಸೆಯೇ ಬೇಡ, ಹೋಮ್ ಐಸೋಲೇಷನ್ ಮಾಡಿಸುವುದಾಗಿ ತಿಳಿಸಿ ಡಿಸ್ಚಾರ್ಜ್​ಗೆ ಒತ್ತಾಯಿಸಿದರು. ವೃದ್ಧೆಯ ಆರೋಗ್ಯ ಸ್ಥಿರವಾಗಿದ್ದ ಹಿನ್ನೆಲೆಯಲ್ಲಿ ಅವರು ಹೋಮ್ ಐಸೋಲೇಷನ್​​​ಗೆ ಒಪ್ಪಿದರು. ವಿಧಿಯಿಲ್ಲದೆ ವೈದ್ಯರು ಒಪ್ಪಿಗೆ ನೀಡಿದ್ದಾರೆ. ಆ್ಯಂಬುಲೆನ್ಸ್ ಸೇವೆಯನ್ನು ಸಹ ನಿರಾಕರಿಸಿದ ವೃದ್ಧೆ ಬೈಕ್​​ನಲ್ಲಿಯೇ ತಮ್ಮ ಗ್ರಾಮಕ್ಕೆ ಬಂದಿದ್ದಾರೆ.

ಆಸ್ಪತ್ರೆಯಲ್ಲಿ ಕೋವಿಡ್​ ಚಿಕಿತ್ಸೆ ನಿರಾಕರಿಸಿದ ವೃದ್ಧೆ

ಈ ಕುರಿತು 'ಈಟಿವಿ ಭಾರತ'ಕ್ಕೆ ಮಾಹಿತಿ ನೀಡಿರುವ ಪ್ರಭಾರ ವೈದ್ಯಾಧಿಕಾರಿ ಡಾ. ಶರಣು ಮೂಲಿಮನಿ ಅವರು, 65 ವರ್ಷದ ವೃದ್ಧೆಗೆ ಈ ಆಸ್ಪತ್ರೆಯಲ್ಲಿ ಒಬ್ಬಂಟಿಯಾಗಿ ಚಿಕಿತ್ಸೆ ಪಡೆಯಲು ಇಷ್ಟವಿರಲಿಲ್ಲ. ಈ ಹಿನ್ನೆಲೆಯಲ್ಲಿ ಅವರ ಮನೆಯವರು ಹೋಮ್ ಐಸೋಲೇಷನ್​ಗೆ ಒಪ್ಪಿದ್ದರಿಂದ ಅನುಮತಿ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.

ಕುಷ್ಟಗಿ ನಿವಾಸಿ ಅಬ್ದುಲ್ ನಯೀಮ್ ಪ್ರತಿಕ್ರಿಯಿಸಿ, ಈ ಕೋವಿಡ್ ಆಸ್ಪತ್ರೆಯು ಅವ್ಯವಸ್ಥೆಯ ಆಗರವಾಗಿದ್ದರಿಂದ ರೋಗಿಗಳು ಚಿಕಿತ್ಸೆಯನ್ನು ನಿರಾಕರಿಸುತ್ತಿದ್ದಾರೆ ಎಂದು ಆರೋಪಿಸಿದರು. ಈ ಆಸ್ಪತ್ರೆಯಲ್ಲಿ ಸೂಕ್ತ ವ್ಯವಸ್ಥೆ ಇಲ್ಲದೆ ರೋಗಿಗಳು ಪರದಾಡುವಂತಾಗಿದೆ. ಈ ಕೂಡಲೇ ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸಿ ಸೂಕ್ತ ವ್ಯವಸ್ಥೆ ಒದಗಿಸಬೇಕು ಎಂದು ಒತ್ತಾಯಿಸಿದರು.

Last Updated : Sep 2, 2020, 1:03 PM IST

ABOUT THE AUTHOR

...view details