ಕೊಪ್ಪಳ: ಕಟ್ಟಡ ಕಾಮಗಾರಿಗೆ ತೆಗೆಯಲಾಗಿದ್ದ ಗುಂಡಿಯಲ್ಲಿ ಕಾಲುಜಾರಿ ಬಿದ್ದು 15 ವರ್ಷದ ಬಾಲಕಿ ಸಾವಿಗೀಡಾದ ಘಟನೆ ಬುಧವಾರ ಕೊಪ್ಪಳದಲ್ಲಿ ಜರುಗಿದೆ. ಶ್ರೀದೇವಿ ಮೃತ ಬಾಲಕಿ.
ಕೊಪ್ಪಳ ನಗರದ ಹೊಸಪೇಟೆ ರಸ್ತೆಯಲ್ಲಿರುವ ಕೆ.ಎಸ್.ಆಸ್ಪತ್ರೆ ಪಕ್ಕದಲ್ಲಿ ಕಟ್ಟಡ ಕಾಮಗಾರಿಗೆಂದು ಅಗೆಯಲಾಗಿದ್ದ ಗುಂಡಿ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಗೆ ತುಂಬಿಕೊಂಡಿತ್ತು. ಕೆ.ಎಸ್.ಆಸ್ಪತ್ರೆಯಲ್ಲಿ ದಾಖಲಾಗಿದ್ದ ಸಂಬಂಧಿಗೆ ಊಟ ಕೊಡಲು ಮಂಗಳವಾರ ಬಂದಿದ್ದ 15 ವರ್ಷದ ಬಾಲಕಿ ಶ್ರೀದೇವಿ ಕಾಲು ಜಾರಿ ಗುಂಡಿಗೆ ಬಿದ್ದಿದ್ದಾಳೆ. ಮೊನ್ನೆ ಸಂಜೆಯಿಂದ ಕಾಣೆಯಾದ ಮಗಳಿಗಾಗಿ ಪೋಷಕರು ಹುಡುಕಾಡಿದ್ದಾರೆ.