ಕರ್ನಾಟಕ

karnataka

ETV Bharat / state

ಕೊಪ್ಪಳದಲ್ಲಿ 73 ವಿದ್ಯಾರ್ಥಿಗಳಿಗೆ ಕೋವಿಡ್​: 9 ಶಾಲೆಗಳಿಗೆ ರಜೆ ಘೋಷಣೆ - schools in Koppal district closed

ಒಂದೇ ದಿನದಲ್ಲಿ ಕೊಪ್ಪಳ ಜಿಲ್ಲೆಯ 9 ಶಾಲೆಗಳ 73 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ತಗುಲಿದ್ದು, ಇಂದಿನಿಂದ ಜನವರಿ 26ರವರೆಗೂ ಈ ಶಾಲೆಗಳನ್ನು ಮುಚ್ಚುವಂತೆ ಜಿಲ್ಲಾಡಳಿತ ಘೋಷಣೆ ಮಾಡಿದೆ.

9 schools in Koppal district closed as 73 students tested positive for covid
ಕೊಪ್ಪಳದಲ್ಲಿ 73 ವಿದ್ಯಾರ್ಥಿಗಳಿಗೆ ಕೋವಿಡ್​

By

Published : Jan 22, 2022, 11:54 AM IST

ಕೊಪ್ಪಳ:ನಿನ್ನೆ ಒಂದೇ ದಿನ ಕೊಪ್ಪಳಜಿಲ್ಲೆಯ 9 ಶಾಲೆಗಳ 73 ವಿದ್ಯಾರ್ಥಿಗಳು, 6 ಶಿಕ್ಷಕರು, ಓರ್ವ ಅಡುಗೆ ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಆ ಶಾಲೆಗಳಿಗೆ ಜಿಲ್ಲಾಡಳಿತ ರಜೆ ಘೋಷಣೆ ಮಾಡಿದೆ.

ಗಂಗಾವತಿ ತಾಲೂಕಿನ ಆಚಾರ್ ನರಸಾಪೂರ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆ, ಮರಳಿಯ ಹಿರಿಯ ಪ್ರಾಥಮಿಕ ಶಾಲೆ, ಕೊಪ್ಪಳ ತಾಲೂಕಿನ ಶಿವಪುರದ ಹಿರಿಯ ಪ್ರಾಥಮಿಕ ಶಾಲೆ, ಕುಷ್ಟಗಿ ತಾಲೂಕಿನ ಹನುಮಸಾಗರ ಸರ್ಕಾರಿ ಬಾಲಕಿಯರ ಪ್ರೌಢಶಾಲೆ, ಕುಷ್ಟಗಿ ಪಟ್ಟಣದ ಇಂದಿರಾಗಾಂಧಿ ವಸತಿ ಶಾಲೆ ಹಾಗೂ ಪಟ್ಟಣದ ಸರ್ಕಾರಿ ಬಾಲಕರ ಹಿರಿಯ ಪ್ರಾಥಮಿಕ ಶಾಲೆ, ಕುಕನೂರು ತಾಲೂಕಿನ ತಳಕಲ್ ಗ್ರಾಮದ ಆರ್​ಎಂಎಸ್​​ಎ ವಸತಿ ಶಾಲೆ ಮತ್ತು ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಕೊರೊನಾ ಸ್ಫೋಟಗೊಂಡಿದೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಹೀಗಾಗಿ ಈ 9 ಶಾಲೆಗಳನ್ನು ಇಂದಿನಿಂದ ಜನವರಿ 26ರವರೆಗೂ ಮುಚ್ಚುವಂತೆ ಜಿಲ್ಲಾಡಳಿತ ಘೋಷಣೆ ಮಾಡಿದೆ.

ABOUT THE AUTHOR

...view details