ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನಲ್ಲಿ ಸಂಜೆ ಗುಡುಗು, ಸಿಡಿಲು ಸಹಿತ ಭಾರಿ ಮಳೆಯಾಗಿದ್ದು, ಸಿಡಿಲಿಗೆ 82 ಕುರಿಗಳು ಸೇರಿದಂತೆ ಆಕಳು, ಕರುಗಳು ಬಲಿಯಾಗಿವೆ.
ಗುಡುಗು-ಸಿಡಿಲಿನ ಆರ್ಭಟ : 82 ಕುರಿ ಸೇರಿ ಜಾನುವಾರು ಸಾವು - undefined
ಕೊಪ್ಪಳ ಜಿಲ್ಲೆಯಲ್ಲಿ ಸಿಡಿಲಿನ ಆರ್ಭಟಕ್ಕೆ ಕುರಿ, ಜಾನುವರುಗಳು ಬಲಿಯಾಗಿದ್ದು ರೈತರು ಕಂಗಾಲಾಗಿದ್ದಾರೆ.
82 ಕುರಿ ಸೇರಿ ಜಾನುವಾರು ಸಾವು
ಕುಷ್ಟಗಿ ತಾಲೂಕಿನ ಹಿರೇಮನ್ನಾಪುರ ಗ್ರಾಮದ ನಿಂಗಪ್ಪ ಹನುಮಪ್ಪ ಕೋಳಿಹಾಳ ಎಂಬುವರಿಗೆ ಸೇರಿದ 1ಎತ್ತು, ಹಾಳೂರಪ್ಪ ಸಣ್ಣ ಯಮನಪ್ಪ ಮಾದರ ಅವರಿಗೆ ಸೇರಿದ 1ಆಕಳು, 1 ಕರು, ಸುಮಾರು 82 ಕುರಿಗಳು ಸಾವನ್ನಪ್ಪಿವೆ. ಇನ್ನು ತಾವರಗೇರಾ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕ ಮುರ್ಕತನಾಳ ಗ್ರಾಮದ ಹನುಮಗೌಡ ಶ್ಯಾಮನಗೌಡ ಗೌಡ್ರ ಎಂಬುವರ 1ಎತ್ತು, ಹನಮಪ್ಪ ಬಂಗ್ಲೇರ ಎಂಬುವರ 1 ಆಕಳು ಸಾವನ್ನಪ್ಪಿವೆ ಎಂದು ತಿಳಿದುಬಂದಿದೆ.