ಕರ್ನಾಟಕ

karnataka

ETV Bharat / state

ಗಂಗಾವತಿಯಲ್ಲಿ 30 ಟ್ರ್ಯಾಕ್ಟರ್​​ ಫಿಲ್ಟರ್​ ಮರಳು ವಶ - ಗಂಗಾವತಿಯಲ್ಲಿ ಅಕ್ರಮ ಮರಳುಗಾರಿಕೆ

ಮಣ್ಣನ್ನು ನೀರಿನಲ್ಲಿ ಬೆರೆಸಿ ಅಕ್ರಮವಾಗಿ ಮರಳು ತೆಗೆಯುತ್ತಿದ್ದ ಘಟಕದ ಮೇಲೆ ಅಧಿಕಾರಿಗಳು ದಾಳಿ ನಡೆಸಿರುವ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿ ನಡೆದಿದೆ.

dfdf
ಗಂಗಾವತಿಯಲ್ಲಿ 75 ಕ್ಯೂಬಿಕ್ ಮೀಟರ್ ಫಿಲ್ಟರ್ ಸ್ಯಾಂಡ್ ಸೀಜ್

By

Published : Jun 16, 2020, 8:30 PM IST

ಗಂಗಾವತಿ: ಮಣ್ಣನ್ನು ನೀರಿನಲ್ಲಿ ಬೆರೆಸಿ ಅಕ್ರಮವಾಗಿ ಮರಳು ತೆಗೆಯುತ್ತಿದ್ದ ಘಟಕದ ಮೇಲೆ ದಾಳಿ ಮಾಡಿ 75 ಕ್ಯೂಬಿಕ್ ಮೀಟರ್ (30 ಟ್ರ್ಯಾಕ್ಟರ್) ಪ್ರಮಾಣದ ಮರಳನ್ನು ಅಧಿಕಾರಿಗಳು ಸೀಜ್ ಮಾಡಿದ್ದಾರೆ.

ಗಂಗಾವತಿಯಲ್ಲಿ 75 ಕ್ಯೂಬಿಕ್ ಮೀಟರ್ ಫಿಲ್ಟರ್ ಸ್ಯಾಂಡ್ ಸೀಜ್

ತಾಲೂಕಿನ ವೆಂಕಟಗಿರಿ ಹೋಬಳಿಯ ಆರ್ಹಾಳ ಗ್ರಾಮದಲ್ಲಿ ಈ ದಾಳಿ ನಡೆದಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಕಂದಾಯ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳ ಜಂಟಿ ಕಾರ್ಯಾಚರಣೆಯಲ್ಲಿ ಈ ಅಕ್ರಮ ಮರಳನ್ನು ವಶಕ್ಕೆ ಪಡೆಯಲಾಗಿದೆ.

ಮಣ್ಣನ್ನು ತಂದು ನೀರಿನಲ್ಲಿ ಬೆರೆಸಿ ಅಸ್ವಾಭಾವಿಕವಾಗಿ ಮರಳು ತೆಗೆದು ಗ್ರಾಹಕರಿಗೆ ನೈಜ ಮರಳೆಂದು ಆರೋಪಿಗಳು ಮಾರಾಟ ಮಾಡುತ್ತಿದ್ದರಂತೆ. ಇದಕ್ಕೆ ಇಲಾಖೆಯಿಂದ ಯಾವುದೇ ಅನುಮತಿ ಪಡೆದಿರಲಿಲ್ಲ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ರೂಪ ಮಾಹಿತಿ ನೀಡಿದ್ದಾರೆ.

ABOUT THE AUTHOR

...view details