ಕುಷ್ಟಗಿ (ಕೊಪ್ಪಳ):ಸರ್ಕಾರದ ಮಾರ್ಗಸೂಚಿ ಉಲ್ಲಂಘಿಸಿ ಕುಷ್ಟಗಿ ತಾಲೂಕಿನ ಜಾಲಿಹಾಳ ಶ್ರೀ ದುರ್ಗಾದೇವಿ ಜಾತ್ರಾ ಮಹೋತ್ಸವ ನಡೆಸಿದ ಹಿನ್ನೆಲೆಯಲ್ಲಿ 7 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿ ಜಾಲಿಹಾಳ ದುರ್ಗಾದೇವಿ ಜಾತ್ರೆ: 7 ಜನರ ಬಂಧನ - ಕುಷ್ಟಗಿಯಲ್ಲಿ ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿದ 7 ಜನರ ಬಂಧನ
ಶ್ರೀ ದುರ್ಗಾದೇವಿ ಜಾತ್ರೆಯ ಅಂಗವಾಗಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳ ಸಂದರ್ಭ ಕೋವಿಡ್ ನಿಯಮಗಳನ್ನು ಸಂಪೂರ್ಣ ಉಲ್ಲಂಘಿಸಿದ ಕಾರಣ ಕುಷ್ಟಗಿಯಲ್ಲಿ 7 ಜನರನ್ನು ಬಂಧಿಸಲಾಗಿದೆ.
ಕಳೆದ ಬುಧವಾರ ಸಂಜೆ ಶ್ರೀ ದುರ್ಗಾದೇವಿ ಜಾತ್ರೆಯ ಸಂಬಂಧ ಅಕ್ಕಿ ಪಾಯಸದ ನೈವೇದ್ಯ, ಅಗ್ನಿಕುಂಡ ಸೇವೆ, ದೇವಿ ಪಲ್ಲಕ್ಕಿ ಮಹೋತ್ಸವ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳು ನೆರವೇರುವ ಸಂದರ್ಭದಲ್ಲಿ ಕೋವಿಡ್ ಎರಡನೇ ಅಲೆ ಇದ್ದರೂ ಕೂಡ ಯಾವುದೇ ಮುನ್ನೆಚ್ಚರಿಕೆ ವಹಿಸಿರಲಿಲ್ಲ ಎನ್ನಲಾಗಿದೆ.
ಜನಸಂದಣಿ ಪ್ರದೇಶದಲ್ಲಿ ಕೋವಿಡ್ ವೈರಸ್ ಹರಡುವ ಸಾಧ್ಯತೆ ಇದ್ದು, ಜಾತ್ರೆ ನಡೆಸಿದ ಹಿನ್ನೆಲೆಯಲ್ಲಿ ರಮೇಶ್ ಪಡಿಯಪ್ಪ ಪೂಜಾರ, ಶೇಖರಪ್ಪ ರುದ್ರಪ್ಪ ಬದಾಮಿ, ದೇವಪ್ಪ ಭರಮಪ್ಪ ಕ್ಯಾದಗುಪ್ಪಿ, ದುರಗಪ್ಪ ಯಂಕಪ್ಪ ಗೋತಗಿ, ದೇವಪ್ಪ ಹಿರೇಹನಮಪ್ಪ ರಕ್ಕರಗಿ, ಚಂಸನಗೌಡ ಸಂಗನೌಡ ಮಾಲಿಪಾಟೀಲ, ಗುಂಡಪ್ಪ ರಾಜಪ್ಪ ಉಪ್ಪಾರ ಎಂಬುವರ ವಿರುದ್ಧ ಕೋವಿಡ್ ಸಂದರ್ಭದಲ್ಲಿ ವಿಪತ್ತು ಕಾಯ್ದೆ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಪಿಡಿೊ ವೆಂಕಟೇಶ ಪವಾರ್ ದೂರಿನ ಮೇರೆಗೆ ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.