ಗಂಗಾವತಿ (ಕೊಪ್ಪಳ) :ಕೊರೊನಾದ ಎರಡನೇ ಅಲೆ ಜಿಲ್ಲೆಯಲ್ಲಿ ವ್ಯಾಪಿಸುತ್ತಿದೆ. ಇದುವರೆಗೂ ಗಂಗಾವತಿ ನಗರ ಒಂದರಲ್ಲಿಯೇ 68 ಪ್ರಕರಣ ಪತ್ತೆಯಾಗಿವೆ ಎಂದು ತಾಲೂಕು ಆರೋಗ್ಯ ಇಲಾಖೆಯ ಪ್ರಭಾರಿ ಅಧಿಕಾರಿ ಆಶಾ ಬೇಗಂ ಹೇಳಿದರು.
ಈವರೆಗೂ ಗಂಗಾವತಿ ನಗರ ಒಂದರಲ್ಲಿಯೇ 68 ಕೊರೊನಾ ಪ್ರಕರಣ ಪತ್ತೆ.. ಮಂಥನದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಎರಡ್ಮೂರು ವಾರದಲ್ಲಿ ನಗರದಲ್ಲಿ 68 ಸಕ್ರಿಯ ಪ್ರಕರಣಗಳಿವೆ. ಬಹುತೇಕ ಎಲ್ಲರೂ ಚಿಕಿತ್ಸೆ ಪಡೆದು ಗುಣಮುಖರಾಗುತ್ತಿದ್ದಾರೆ. ಯಾರೂ ಆತಂಕ್ಕೀಡಾಗುವ ಅಗತ್ಯವಿಲ್ಲ. ಇಲಾಖೆ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ ಎಂದರು.
ಜಯನಗರ ಎಸ್ಟಿ ವಿದ್ಯಾರ್ಥಿ ನಿಲಯದಲ್ಲಿನ ವಿದ್ಯಾರ್ಥಿಗಳಿಗೆ ಏಕಕಾಲದಲ್ಲಿ ಸೋಂಕು ಹರಡಿದ ಬಗ್ಗೆ ತಾಲೂಕು ಪಂಚಾಯತ್ ಅಧ್ಯಕ್ಷ ಮೊಹಮ್ಮದ್ ರಫಿ ಸಭೆಯಲ್ಲಿ ಮಾಹಿತಿ ಕೋರಿದರು.
ಇದಕ್ಕೆ ಪ್ರತಿಕ್ರಿಯಿಸಿದ ಇಲಾಖೆಯ ಅಧಿಕಾರಿ ತುಗ್ಲೆಪ್ಪ ದೇಸಾಯಿ, ಒಟ್ಟು 23 ಮಕ್ಕಳಿಗೆ ಸೋಂಕು ತಗುಲಿತ್ತು. ಇದೀಗ ಬಹುತೇಕರು ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಪದವಿ ವಿದ್ಯಾರ್ಥಿಗಳಿಗೆ ಮಾತ್ರ ಸದ್ಯಕ್ಕೆ ವಸತಿ ನಿಲಯದಲ್ಲಿ ಅವಕಾಶ ನೀಡಲಾಗಿದೆ ಎಂದರು.
ಓದಿ:ಸತೀಶ ಜಾರಕಿಹೊಳಿ ಉತ್ತರಾಧಿಕಾರಿ ಆಗ್ತಾರಾ ಪುತ್ರಿ ಪ್ರಿಯಾಂಕಾ.!?