ಕರ್ನಾಟಕ

karnataka

ETV Bharat / state

ಕೊಪ್ಪಳದಲ್ಲಿ ರಸ್ತೆಗಿಳಿದ ಶೇ. 66ರಷ್ಟು ಸರ್ಕಾರಿ ಬಸ್​ಗಳು - ksrtc strike

ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಕೊಪ್ಪಳ ವಿಭಾಗದಿಂದ ಇಂದು ಶೇ. 66ರಷ್ಟು ಬಸ್​​ಗಳು ಸಂಚಾರ ಆರಂಭಿಸಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಟ್ಟಿವೆ.

66% buses started operating  in koppala
ಬಸ್ಸುಗಳು ಸಂಚಾರ ಆರಂಭ

By

Published : Apr 21, 2021, 3:34 PM IST

ಕೊಪ್ಪಳ: ನೌಕರರ ಮುಷ್ಕರದ ನಡುವೆ ಸಾರಿಗೆ ಸಂಸ್ಥೆಯ ಬಸ್​ಗಳು ದಿನದಿಂದ ದಿನಕ್ಕೆ ಹೆಚ್ಚಿನ ಪ್ರಮಾಣದಲ್ಲಿ ರಸ್ತೆಗೆ ಇಳಿಯುತ್ತಿದ್ದು, ಇಂದು ಅಪರಾಹ್ನದ ವೇಳೆಗೆ ಕೊಪ್ಪಳ ವಿಭಾಗದಿಂದ ಶೇ. 66ರಷ್ಟು ಬಸ್​​ಗಳು ಸಂಚಾರ ನಡೆಸಿವೆ‌.

ಈ ಕುರಿತು ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಕೊಪ್ಪಳ ವಿಭಾಗೀಯ ನಿಯಂತ್ರಣಾಧಿಕಾರಿ ಎಂ.ಎ.ಮುಲ್ಲಾ ಪ್ರತಿಕ್ರಿಯಿಸಿ, ಕೊಪ್ಪಳ ವಿಭಾಗದಲ್ಲಿ ಐದು ಡಿಪೋಗಳಿದ್ದು ಇಂದು ಮಧ್ಯಾಹ್ನ 12 ಗಂಟೆಯ ವೇಳೆಗೆ 203 ಬಸ್​ಗಳು ಸಂಚಾರ ಮಾಡಬೇಕಿತ್ತು. ಆ ಪೈಕಿ 134 ಬಸ್​ಗಳು ಸಂಚಾರ ಮಾಡಿವೆ. ಇಂದು ಮಧ್ಯಾಹ್ನ ಕೊಪ್ಪಳ ಘಟಕದಿಂದ 55 ಬಸ್ ಗಳು ಸಂಚರಿಸಬೇಕಿತ್ತು. 38 ಬಸ್​​ಗಳು ಸಂಚರಿಸಿವೆ.

ಕುಷ್ಟಗಿ ಘಟಕದಿಂದ 46 ಬಸ್​ಗಳ ಪೈಕಿ 23, ಗಂಗಾವತಿ ಘಟಕದಿಂದ 56 ಬಸ್​ಗಳ ಪೈಕಿ 36, ಯಲಬುರ್ಗಾ ಘಟಕದಿಂದ 24 ಬಸ್​​ಗಳ ಪೈಕಿ 16, ಕುಕನೂರು ಘಟಕದಿಂದ 32ರ ಪೈಕಿ 22 ಬಸ್​ಗಳು ಸಂಚಾರ ಮಾಡಿದೆ. ಒಟ್ಟು ಶೇ. 66ರಷ್ಟು ಬಸ್​​​ಗಳು ಸಂಚಾರ ನಡೆಸಿದ್ದು, ಸಂಜೆಯ ವೇಳೆಗೆ ಇದರ ಪ್ರಮಾಣ ಇನ್ನಷ್ಟು ಹೆಚ್ಚಾಗಲಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಂ.ಎ.ಮುಲ್ಲಾ ತಿಳಿಸಿದ್ದಾರೆ.

ABOUT THE AUTHOR

...view details