ಕರ್ನಾಟಕ

karnataka

ETV Bharat / state

ಎಸ್​​​ಎಸ್​​ಎಲ್​​ಸಿ ಪರೀಕ್ಷೆಗೆ ಹಾಜರಾದ ಸೀಲ್​ಡೌನ್​ ಏರಿಯಾದ 65 ಮಕ್ಕಳು.. - children in seal down area

ಸೀಲ್​​ಡೌನ್ ಹಾಗೂ ಕಂಟೇನ್​ಮೆಂಟ್ ಪ್ರದೇಶದಲ್ಲಿನ ಮಕ್ಕಳಿಗಾಗಿಯೇ ತಾಲೂಕಿನ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಪ್ರತ್ಯೇಕ ಆಸನದ ವ್ಯವಸ್ಥೆ ಮಾಡಲಾಗಿತ್ತು. ಅಲ್ಲದೇ ವಲಸೆ ಬಂದ 120 ಮಕ್ಕಳು ಪರೀಕ್ಷೆಗೆ ಹಾಜರಾಗಿದ್ದರು..

65 children in seal down area attending SSLC exam ..
ಹತ್ತನೇ ತರಗತಿಯ ಪರೀಕ್ಷೆ

By

Published : Jun 29, 2020, 9:22 PM IST

ಗಂಗಾವತಿ :ಕೊರೊನಾ ಪಾಸಿಟಿವ್ ಪ್ರಕರಣದ ಹಿನ್ನೆಲೆ ಸೀಲ್​​ಡೌನ್ ಹಾಗೂ ಕಂಟೇನ್​ಮೆಂಟ್ ಆದ ಪ್ರದೇಶದಲ್ಲಿನ 65 ಮಕ್ಕಳು, 10ನೇ ತರಗತಿಯ ಪರೀಕ್ಷೆಗೆ ತಾಲೂಕಿನ ನಾನಾ ಕೇಂದ್ರಗಳಲ್ಲಿ ಹಾಜರಾಗಿದ್ದಾರೆ.

ಶನಿವಾರದಿಂದ ತಾಲೂಕಿನಲ್ಲಿ ಒಟ್ಟು ನಾಲ್ಕು ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿವೆ. ಸೋಂಕು ದೃಢಪಟ್ಟ ಪ್ರದೇಶದಲ್ಲಿ ಸೀಲ್​​ಡೌನ್​​​​ ಮಾಡಲಾಗಿದೆ. ಆ ಭಾಗದಲ್ಲಿನ ಒಟ್ಟು 65 ಮಕ್ಕಳು ಪರೀಕ್ಷೆಗೆ ಹಾಜರಾಗಿದ್ದಾರೆ.

ಕ್ಷೇತ್ರ ಶಿಕ್ಷಣಾಧಿಕಾರಿಗಳ ಮಾಹಿತಿ ಪ್ರತಿ

ಸೀಲ್​​ಡೌನ್ ಹಾಗೂ ಕಂಟೇನ್​ಮೆಂಟ್ ಪ್ರದೇಶದಲ್ಲಿನ ಮಕ್ಕಳಿಗಾಗಿಯೇ ತಾಲೂಕಿನ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಪ್ರತ್ಯೇಕ ಆಸನದ ವ್ಯವಸ್ಥೆ ಮಾಡಲಾಗಿತ್ತು. ಅಲ್ಲದೇ ವಲಸೆ ಬಂದ 120 ಮಕ್ಕಳು ಪರೀಕ್ಷೆಗೆ ಹಾಜರಾಗಿದ್ದರು.

ABOUT THE AUTHOR

...view details