ಕರ್ನಾಟಕ

karnataka

ETV Bharat / state

ಸೇನೆಗೆ ಕೊಪ್ಪಳ ಜಿಲ್ಲೆಯಿಂದ 62 ಮಂದಿ ನೇಮಕ: ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ - ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್

ಕಳೆದ ನವೆಂಬರ್​​​ನಲ್ಲಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಸೇನಾ ನೇಮಕಾತಿ ರ‌್ಯಾಲಿಯಲ್ಲಿ‌ 62 ಯುವಕರು ಆಯ್ಕೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ತಿಳಿಸಿದ್ದಾರೆ.

District Collector P. Sunil Kumar
ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್

By

Published : Feb 4, 2020, 11:46 PM IST

ಕೊಪ್ಪಳ:ಕಳೆದ ನವೆಂಬರ್​​​ನಲ್ಲಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಸೇನಾ ನೇಮಕಾತಿ ರ‌್ಯಾಲಿಯಲ್ಲಿ‌ 62 ಯುವಕರು ಆಯ್ಕೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ತಿಳಿಸಿದ್ದಾರೆ.

ಸೇನಾ ನೇಮಕಾತಿ ರ್ಯಾಲಿಯಲ್ಲಿ ಕೊಪ್ಪಳ ಜಿಲ್ಲೆಯಿಂದ ಒಟ್ಟು 2,458 ಅಭ್ಯರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದರು. ಆ ಪೈಕಿ ರನ್ನಿಂಗ್​​ಗೆ 1800 ಯುವಕರು ಹಾಜರಾಗಿದ್ದರು. ಅದರಲ್ಲಿ 330 ಯುವಕರು ಉತ್ತೀರ್ಣರಾಗಿ ದೈಹಿಕ ಪರೀಕ್ಷೆಗೆ 229 ಮಂದಿ ಆಯ್ಕೆಯಾಗಿದ್ದರು. ಅಂತಿಮವಾಗಿ 62 ಅಭ್ಯರ್ಥಿಗಳು ನೇಮಕ ಹೊಂದಿದ್ದಾರೆ.

2018ರಲ್ಲಿ ನಡೆದಿದ್ದ ಸೇನಾ ನೇಮಕಾತಿ ರ‌್ಯಾಲಿಯಲ್ಲಿ ಜಿಲ್ಲೆಯಿಂದ ಕೇವಲ 7 ಮಂದಿ ಮಾತ್ರ ನೇಮಕಾತಿ ಹೊಂದಿದ್ದರು. ಅದಕ್ಕೆ ಹೋಲಿಸಿದರೆ 2019ರ‌‌ಲ್ಲಿ ಹೆಚ್ಚು ಮಂದಿ ನೇಮಕವಾಗಿರುವುದು ಉತ್ತಮ ಬೆಳವಣಿಗೆ ಎಂದು‌ ಜಿಲ್ಲಾಧಿಕಾರಿ ಹೇಳಿದ್ದಾರೆ.

ABOUT THE AUTHOR

...view details