ಕೊಪ್ಪಳ: 6 ವರ್ಷದ ಬಾಲಕಿಯೊಬ್ಬಳು ತಾನು ಕೂಡಿಟ್ಟಿದ್ದ ಹಣವನ್ನು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರದ ಕೋವಿಡ್ ಕೇರ್ಗೆ ದೇಣಿಗೆ ನೀಡಿದ್ದಾಳೆ.
ಜಿಲ್ಲೆಯ ಕುಷ್ಟಗಿ ತಾಲೂಕಿನ ಕಲಾಲಬಂಡಿ ಗ್ರಾಮದ ಸುಪ್ರಿತಾ ಚಂದಾಲಿಂಗ, ದೇಣಿಗೆ ನೀಡಿರುವ ಬಾಲಕಿ. ತಾನು ಕೂಡಿಟ್ಟಿದ್ದ 3,673 ರೂ.ಗಳನ್ನು ಜಿಲ್ಲಾಧಿಕಾರಿ ಪಿ.ಸುನೀಲ್ಕುಮಾರ್ ಅವರ ಮೂಲಕ ಸರ್ಕಾರಕ್ಕೆ ನೀಡಿದಳು.
ಜಿಲ್ಲಾಧಿಕಾರಿಗೆ ಕೂಡಿಟ್ಟ ಹಣ ನೀಡುತ್ತಿರುವ ಬಾಲಕಿ ಈ ಕುರಿತು ಬಾಲಕಿ ತಂದೆ ಮಾತನಾಡಿ, ನಾವು ಆಗಾಗ ಕೊಟ್ಟ ಚಿಲ್ಲರೆ ಹಣವನ್ನು ಕೂಡಿಟ್ಟಿದ್ದಳು. ಸದ್ಯದ ಪರಿಸ್ಥಿಯನ್ನು ಕಂಡು ಕೋವಿಡ್ ಕೇರ್ಗೆ ಹಣ ನೀಡುವುದಾಗಿ ಹೇಳಿದಳು. ಹೀಗಾಗಿ ಮಗಳನ್ನು ಕರೆತಂದು ಡಿಸಿಯವರಿಗೆ ಹಣ ತಲುಪಿಸಿದ್ದೇವೆ ಎಂದರು.
ಇಷ್ಟು ಸಣ್ಣ ವಯಸ್ಸಿನಲ್ಲಿಯೇ ಇಂತಹ ಸಹಾಯ ಮಾಡುವ ಗುಣ ಹೊಂದಿರುವ ಈ ಬಾಲಕಿಯ ಕೆಲಸಕ್ಕೆ ಡಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.