ಕುಷ್ಟಗಿ(ಕೊಪ್ಪಳ): ಜೂನ್ 25ರಿಂದ ಆರಂಭವಾಗುವ ಎಸ್ಎಸ್ಎಲ್ಸಿ ಪರೀಕ್ಷೆಯನ್ನು ವಿದ್ಯಾರ್ಥಿಗಳು ನಿರ್ಭೀತಿಯಿಂದ ಬರೆಯಲು ಪೂರಕವಾಗಿ 6,000 ಡಬಲ್ ಲೇಯರ್ ಮಾಸ್ಕ್ಗಳನ್ನು ಭಾರತ ಸ್ಕೌಟ್ಸ್ ಅಂಡ್ ಗೈಡ್ಸ್ ಮೂಲಕ ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯಕ್ಕೆ ಸಾಂಕೇತಿಕವಾಗಿ ಹಸ್ತಾಂತರಿಸಲಾಯಿತು.
ಕೊಪ್ಪಳ: SSLC ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ವಿತರಿಸಲು 6 ಸಾವಿರ ಮಾಸ್ಕ್ ಹಸ್ತಾಂತರ - India Scouts and Guides
ಹತ್ತಿ ಬಟ್ಟೆಯಿಂದ ತಯಾರಿಸಿದ ವಿವಿಧ ಬಣ್ಣಗಳ ಡಬಲ್ ಲೇಯರ್ ಮಾಸ್ಕ್ಗಳನ್ನು ಸೋಮವಾರ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪುರ ಅನುಪಸ್ಥಿತಿಯಲ್ಲಿ ಅವರ ಪುತ್ರ ದೊಡ್ಡಬಸವ ಬಯ್ಯಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಚನ್ನಬಸಪ್ಪ ಮಗ್ಗದ ಅವರಿಗೆ ಹಸ್ತಾಂತರಿಸಿದರು.
![ಕೊಪ್ಪಳ: SSLC ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ವಿತರಿಸಲು 6 ಸಾವಿರ ಮಾಸ್ಕ್ ಹಸ್ತಾಂತರ Kushtagi](https://etvbharatimages.akamaized.net/etvbharat/prod-images/768-512-7527061-169-7527061-1591608524291.jpg)
ಹತ್ತಿ ಬಟ್ಟೆಯಿಂದ ತಯಾರಿಸಿದ ವಿವಿಧ ಬಣ್ಣಗಳ ಡಬಲ್ ಲೇಯರ್ ಮಾಸ್ಕ್ಗಳನ್ನು ಸೋಮವಾರ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪುರ ಅನುಪಸ್ಥಿತಿಯಲ್ಲಿ ಅವರ ಪುತ್ರ ದೊಡ್ಡಬಸವ ಬಯ್ಯಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಚನ್ನಬಸಪ್ಪ ಮಗ್ಗದ ಅವರಿಗೆ ಹಸ್ತಾಂತರಿಸಿದರು.
ಮಾಸ್ಕ್ಗಳನ್ನು ಸ್ವೀಕರಿಸಿ ಕ್ಷೇತ್ರ ಶಿಕ್ಷಣಾಧಿಕಾರಿ ಚನ್ನಬಸಪ್ಪ ಮಗ್ಗದ ಮಾತನಾಡಿ, ಎಸ್ಎಸ್ಎಲ್ಸಿ ಪರೀಕ್ಷೆ ಬರೆಯುವ ಮಕ್ಕಳಿಗೆ 6 ಸಾವಿರ ಮಾಸ್ಕ್ಗಳನ್ನು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪುರ ಅವರ ಅನುಪಸ್ಥಿತಿಯಲ್ಲಿ ಕೊಡುಗೆ ನೀಡಿದ್ದು, ಪರೀಕ್ಷೆ ಬರೆಯುವ 4,190 ಮಾಸ್ಕ್ಗಳು ಮಕ್ಕಳಿಗೆ ಹಾಗೂ ಇನ್ನುಳಿದ 1,810 ಮಾಸ್ಕ್ಗಳನ್ನು ಪರೀಕ್ಷೆಯ ಕೊಠಡಿ ಮೇಲ್ವಿಚಾರಕರು, ಸ್ಥಾನಿಕ ವಿಚಕ್ಷಣಾ ದಳ, ಪೊಲೀಸರು ಸೇರಿದಂತೆ ಒಟ್ಟು 6 ಸಾವಿರ ಮಾಸ್ಕ್ಗಳನ್ನು ವಿತರಿಸಲಾಗುತ್ತಿದೆ ಎಂದರು.