ಕುಷ್ಟಗಿ : ಬಿಹಾರ ಮೂಲದ 6 ಜನರಿಗೆ ಸ್ಥಳೀಯ ಡಾ.ರಾಜಕುಮಾರ ಕಲ್ಯಾಣ ಮಂಟಪದಲ್ಲಿ ತಾತ್ಕಾಲಿಕ ವಸತಿ ಕಲ್ಪಿಸಲಾಗಿದೆ.
ಬಿಹಾರಿಗಳಿಗೆ ಡಾ.ರಾಜಕುಮಾರ ಕಲ್ಯಾಣ ಮಂಟಪವೇ ಆಸರೆಯಾಯ್ತು - ಡಾ.ರಾಜಕುಮಾರ ಕಲ್ಯಾಣ ಮಂಟಪ
ವ್ಯಾಪಾರಕ್ಕೆಂದು ಬಂದ ಆರು ಜನ ಬಿಹಾರಿ ವ್ಯಾಪಾರಿಗಳಿಗೆ ಲಾಕ್ ಡೌನ್ ವೇಳೆ ಕುಷ್ಟಗಿಯ ರಾಜ್ಕುಮಾರ್ ಕಲ್ಯಾಣಮಂಟಪವೇ ಆಸರೆಯಾಗಿದೆ.
ಗೃಹಪಯೋಗಿ ವಸ್ತುಗಳ ಮಾರಾಟಕ್ಕೆ ಡಾ. ರಾಜಕುಮಾರ ಕಲ್ಯಾಣ ಮಂಟಪ ತಾತ್ಕಾಲಿಕ ಬಾಡಿಗೆ ಪಡೆದಿದ್ದ ಬಿಹಾರ ಮೂಲದ ವರ್ತಕರು, ಇಲ್ಲಿಂದ ನವಲಗುಂದಕ್ಕೆ ಹೋಗಿದ್ದರು. ಆ ವೇಳೆ ಲಾಕಡೌನ್ ಆದ ಹಿನ್ನೆಲೆಯಲ್ಲಿ ಡಾ.ರಾಜಕುಮಾರ ಕಲ್ಯಾಣ ಮಂಟಪಕ್ಕೆ ವಾಪಸ್ ಆಗಿದ್ದರು. ಹೀಗಾಗಿ ಸರ್ಕಾರಿ ಕಲ್ಯಾಣ ಮಂಟಪದಲ್ಲಿ ಉಳಿದುಕೊಂಡಿದ್ದಾರೆ.
ತಮ್ಮಲ್ಲಿರುವ ಹಣದಲ್ಲಿ ದಿನಸಿ ಖರೀದಿಸಿದ್ದು, ಸದ್ಯ ಅವರ ಬಳಿ ಹಣವಿಲ್ಲದೇ ದಿನಸಿ ಆಹಾರಕ್ಕಾಗಿ ಪುರಸಭೆ ಮುಖ್ಯಾಧಿಕಾರಿ ಅಶೋಕ ಪಾಟೀಲ್ ಅವರಿಗೆ ವಿನಂತಿಸಿದ್ದರು. ಸದರಿಯವರ ಮನವಿಗೆ ಸ್ಪಂದಿಸಿದ ಮುಖ್ಯಾಧಿಕಾರಿ ದಾನಿಗಳ ಸಹಾಯದಿಂದ ದಿನಸಿ ಕೊಡಿಸಿದ್ದಾರೆ.