ಕೊಪ್ಪಳ:ರಸ್ತೆಯ ಮೇಲೆ 500 ರೂಪಾಯಿ ಮುಖಬೆಲೆಯ ನೋಟು ಪತ್ತೆಯಾಗಿ ಜಿಲ್ಲೆಯಲ್ಲಿ ಕೆಲ ಕಾಲ ಆತಂಕ ಸೃಷ್ಟಿಯಾಗಿತ್ತು.
ಕೊಪ್ಪಳದ ರಸ್ತೆಯಲ್ಲಿ 500 ರೂಪಾಯಿ ನೋಟು ಪತ್ತೆ: ಸ್ಥಳೀಯರಲ್ಲಿ ಆತಂಕ - ಕೊಪ್ಪಳ ಜಿಲ್ಲೆಯಲ್ಲಿ ಕೊರೊನಾ ಎಫೆಕ್ಟ್
ಕೊಪ್ಪಳ ನಗರದ ರಸ್ತೆಯ ಮೇಲೆ 500 ರೂಪಾಯಿ ಮುಖಬೆಲೆಯ ನೋಟು ಪತ್ತೆಯಾಗಿ ಆತಂಕ ಸೃಷ್ಟಿಯಾಗಿತ್ತು.
ಕೊಪ್ಪಳದ ರಸ್ತೆಯಲ್ಲಿ 500 ರೂಪಾಯಿ ನೋಟು:ಸ್ಥಳೀಯರಲ್ಲಿ ಆತಂಕ
ನಗರದ ಕಲ್ಯಾಣ ನಗರದಲ್ಲಿ ನಿನ್ನೆ ತಡರಾತ್ರಿ 500 ರೂಪಾಯಿ ನೋಟು ಪತ್ತೆಯಾಗಿದ್ದು, ಇದನ್ನು ಗಮನಿಸಿದ ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದರು. ಅಲ್ಲದೆ ಈ ಕುರಿತಂತೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಆಗಮಿಸಿದ ನಗರ ಠಾಣೆಯ ಪೊಲೀಸರು ನೋಟು ವಶಕ್ಕೆ ಪಡೆದುಕೊಂಡಿದ್ದಾರೆ. ಕೊರೊನಾ ಭೀತಿ ಹಿನ್ನೆಲೆ ಕೆಲ ಜಿಲ್ಲೆಗಳ ರಸ್ತೆಯಲ್ಲಿ ಕಾಣ ಸಿಗುತ್ತಿರುವ ನೋಟುಗಳು ಜನರಲ್ಲಿ ಆತಂಕ ಮೂಡಿಸಿದೆ.