ಕರ್ನಾಟಕ

karnataka

ETV Bharat / state

ಗಂಗಾವತಿ: ನೂರು ಮೀಟರ್ ಬದಲಿಗೆ ಶ್ರೀರಾಮನಗರದಲ್ಲಿ 50 ಮೀಟರ್ ಕಂಟೈನ್ಮೆಂಟ್​​​​ ಝೋನ್ - Reduced Zone

ಸೋಂಕು ಕಂಡಲ್ಲಿ 100 ಮೀಟರ್ ಕಂಟೈನ್ಮೆಂಟ್​ ಝೋನ್ ಮಾಡಬೇಕಾದ ಅಧಿಕಾರಿಗಳು ಗಂಗಾವತಿ ತಾಲೂಕಿನಲ್ಲಿ ಬದಲಾದ ಸರ್ಕಾರದ ಗೈಡ್​​ಲೈನ್​ ಪ್ರಕಾರ ಇದೀಗ ಕೇವಲ 50 ಮೀಟರ್​ಗೆ ಇಳಿಕೆ ಮಾಡಿದ್ದಾರೆ. ಇದರಿಂದ ಸ್ಥಳದಲ್ಲಿ ಆತಂಕ ಹೆಚ್ಚಾಗಿದೆ.

50 meter containment zone instead of one hundred meters
ನೂರು ಮೀಟರ್ ಬದಲಿಗೆ ಶ್ರೀರಾಮನಗರದಲ್ಲಿ 50 ಮೀಟರ್ ಝೋನ್

By

Published : Jun 18, 2020, 5:45 PM IST

ಗಂಗಾವತಿ:ಕೊರೊನಾ ಪಾಸಿಟಿವ್ ಕೇಸ್ ಪತ್ತೆಯಾದಲ್ಲಿ ಆ ಸೋಂಕಿತ ವ್ಯಕ್ತಿ ವಾಸಿಸುತ್ತಿದ್ದ ಪ್ರದೇಶದ ಸುತ್ತಲೂ 100 ಮೀಟರ್ ಕಂಟೈನ್ಮೆಂಟ್​ ಝೋನ್​ ಮಾಡಬೇಕು. ಆದರೆ ಇದೀಗ ತಾಲೂಕಿನ ಶ್ರೀರಾಮನರದಲ್ಲಿ ಅಧಿಕಾರಿಗಳು ಕೇವಲ 50 ಮೀಟರ್ ಮಾತ್ರ ಕಂಟೈನ್ಮೆಂಟ್ ಝೋನ್ ಮಾಡುವ ಮೂಲಕ ಆತಂಕಕ್ಕೆ ದಾರಿ ಮಾಡಿಕೊಟ್ಟಿದ್ದಾರೆ ಎನ್ನಲಾಗುತ್ತಿದೆ.

ನೂರು ಮೀಟರ್ ಬದಲಿಗೆ ಶ್ರೀರಾಮನಗರದಲ್ಲಿ 50 ಮೀಟರ್ ಕಂಟೈನ್ಮೆಂಟ್​​ ಝೋನ್

ಇದೇ ಮೊದಲ ಬಾರಿಗೆ ತಾಲೂಕಿನಲ್ಲಿ ಕಂಟೈನ್ಮೆಂಟ್ ಝೋನ್ ವಿಸ್ತರಣೆವನ್ನು ಇಳಿಕೆ ಮಾಡಲಾಗಿದೆ. ಅಲ್ಲದೇ ಬಫರ್ ಝೋನ್ ತೆಗೆದು ಹಾಕಲಾಗಿದೆ. ಗ್ರಾಮದಲ್ಲಿ ಚಹಾ ಮಾರುತ್ತಿದ್ದ ವ್ಯಕ್ತಿಯಲ್ಲಿ ಸೋಂಕು ದೃಢಪಟ್ಟ ಹಿನ್ನೆಲೆ ಆತನ ಮನೆ ಸೂತ್ತಲಿನ ಕೇವಲ 50 ಮೀಟರ್ ಮಾತ್ರ ಕಂಟೈನ್ಮೆಂಟ್​​ ಝೋನ್ ಮಾಡಲಾಗಿದೆ.

ನೂರು ಮೀಟರ್ ಬದಲಿಗೆ ಶ್ರೀರಾಮನಗರದಲ್ಲಿ 50 ಮೀಟರ್ ಕಂಟೈನ್ಮೆಂಟ್​ ಝೋನ್

ಈ ಬಗ್ಗೆ ಮಾಹಿತಿ ನೀಡಿರುವ ಆರೋಗ್ಯ ಇಲಾಖೆಯ ಅಧಿಕಾರಿಗಳು, ಸರ್ಕಾರದ ಬದಲಾದ ಗೈಡ್​ಲೈನ್​ ಪ್ರಕಾರ ಇದೀಗ ಕೇವಲ 50 ಮೀಟರ್ ಮಾತ್ರ ಕಂಟೈನ್ಮೆಂಟ್ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕೇವಲ ಸೋಂಕಿತರ ಮನೆ ಮಾತ್ರ ಸೀಲ್​ ಡೌನ್​ ಮಾಡಲಾಗುವುದು ಎಂದರು.

ನೂರು ಮೀಟರ್ ಬದಲಿಗೆ ಶ್ರೀರಾಮನಗರದಲ್ಲಿ 50 ಮೀಟರ್ ಕಂಟೈನ್ಮೆಂಟ್​ ಝೋನ್

ABOUT THE AUTHOR

...view details