ಗಂಗಾವತಿ: ರೈತನ ಹೊಲದಲ್ಲಿ ಕಾಣಿಸಿಕೊಂಡ ಬರೋಬ್ಬರಿ ಅರ್ಧ ಕ್ವಿಂಟಾಲ್ ತೂಕದ ಹೆಬ್ಬಾವೊಂದನ್ನು ಸ್ನೇಕ್ ಪುಟ್ಟು ಅಲಿಯಾಸ್ ಸಿರಿಗೇರಿ ರಾಘವೇಂದ್ರ ರಕ್ಷಣೆ ಮಾಡಿ ಸುರಕ್ಷಿತ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.
ನಗರದ ದೇವಘಾಟದ ಬಳಿಯಿರುವ ಲಯನ್ಸ್ ಕ್ಲಬ್ ಅಧ್ಯಕ್ಷ ಡಿ.ಎಂ ಅಭಿಷೇಕ್ ಎಂಬುವರ ಹೊಲದಲ್ಲಿ ಈ ಹಾವು ಕಾಣಿಸಿಕೊಂಡಿತ್ತು. ಸ್ಥಳೀಯರೊಬ್ಬರು ಹಾವಿನ ಚಿತ್ರ ಸೆರೆ ಹಿಡಿದು ಸಿರಿಗೇರಿ ರಾಘವೇಂದ್ರ ಅವರಿಗೆ ಕಳುಹಿಸಿದ್ದರು.
ಗಂಗಾವತಿಯಲ್ಲಿ 50 ಕೆಜಿ ತೂಕದ ಹೆಬ್ಬಾವಿನ ರಕ್ಷಣೆ ಕೂಡಲೇ ಸ್ಥಳಕ್ಕೆ ತೆರಳಿದ ಸ್ನೇಕ್ ಪುಟ್ಟು, ರೋಚಕ ಕಾರ್ಯಾಚರಣೆ ನಡೆಸಿ ಭತ್ತದ ಗದ್ದೆಯಲ್ಲಿ ನುಸುಳಿಕೊಂಡು ಹೋಗುತ್ತಿದ್ದ ಹೆಬ್ಬಾವನ್ನು ಸೆರೆ ಹಿಡಿದರು. ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ ನೆರವಿನಿಂದ ಸಂರಕ್ಷಿತ ಪ್ರದೇಶಕ್ಕೆ ಹಾವನ್ನು ಬಿಟ್ಟು ಬರಲಾಯಿತು.
ಸ್ನೇಕ್ ಪುಟ್ಟು ಅವರು ಈವರೆಗೆ ಸುಮಾರು ಮೂರು ಸಾವಿರಕ್ಕೂ ಅಧಿಕ ಹಾವುಗಳನ್ನು ರಕ್ಷಿಸಿದ್ದಾರೆ. ಯಾರಿಂದಲೂ ಹಣ ಪಡೆಯದೇ ಕೇವಲ ವನ್ಯಜೀವಿಗಳ ರಕ್ಷಣೆಗೆ ಮುಂದಾಗಿರುವ ಇವರ ಕಾರ್ಯ ಎಲ್ಲರಿಗೂ ಮಾದರಿ.