ಕರ್ನಾಟಕ

karnataka

ETV Bharat / state

ಕೊಪ್ಪಳ: 50 ಕೆಜಿ ಭಾರ ಎತ್ತಿದ 11 ವರ್ಷದ ಅವಳಿ ಸಹೋದರರು! - ದೇವದುರ್ಗ ತಾಲೂಕಿನ ಮಸರಕಲ್ ಗ್ರಾಮದ ಮರಸಲಿಂಗೇಶ್ವರ ಜಾತ್ರಾ ಮಹೋತ್ಸವ

ದೇವದುರ್ಗ ತಾಲೂಕಿನ ಮಸರಕಲ್ ಗ್ರಾಮದ ಮರಸಲಿಂಗೇಶ್ವರ ಜಾತ್ರಾ ಮಹೋತ್ಸವದಲ್ಲಿ 11 ವರ್ಷದ ಅವಳಿ ಸಹೋದರರು 50 ಕೆ.ಜಿ.ಧಾನ್ಯದ ಚೀಲ ಎತ್ತುವ ಮೂಲಕ ಅಲ್ಲಿದ್ದವರನ್ನು ನಿಬ್ಬೆರಗಾಗಿಸಿದ್ದಾರೆ.

50 kg weight lifting by 11 years twin brothers
50 ಕೆಜಿ ಭಾರ ಎತ್ತಿದ 11 ವರ್ಷದ ಅವಳಿ ಸಹೋದರರು

By

Published : Jan 17, 2022, 9:55 AM IST

Updated : Jan 17, 2022, 10:04 AM IST

ಕುಷ್ಟಗಿ(ಕೊಪ್ಪಳ):ಕುಷ್ಟಗಿಯ 11 ವರ್ಷದ ಅವಳಿ ಸಹೋದರರು ದೇವದುರ್ಗ ತಾಲೂಕಿನ ಮಸರಕಲ್ ಗ್ರಾಮದ ಮರಸಲಿಂಗೇಶ್ವರ ಜಾತ್ರಾ ಮಹೋತ್ಸವದಲ್ಲಿ ನಡೆದ ಭಾರ ಎತ್ತುವ ಸಾಹಸ ಪ್ರದರ್ಶನದಲ್ಲಿ 50 ಕೆ.ಜಿ. ಚೀಲ ಎತ್ತುವ ಮೂಲಕ ಭವಿಷ್ಯದ ಭರವಸೆ ಮೂಡಿಸಿದ್ದಾರೆ.

50 ಕೆಜಿ ಭಾರ ಎತ್ತಿದ 11 ವರ್ಷದ ಅವಳಿ ಸಹೋದರರು

ಕುಷ್ಟಗಿ ಪಟ್ಟಣದ ಅನ್ನದಾನೇಶ್ವರ ನಗರದ ನಿವಾಸಿ ಮರಸಣ್ಣಭೀ. ತಾಳದ ಅವರ ಅವಳಿ ಮಕ್ಕಳಾದ ಅಜಯ್ ಮತ್ತು ವಿಜಯ್ ಇಲ್ಲಿನ ಅಜಯ್ ಅಕ್ಷರ್ ಶಾಲೆಯಲ್ಲಿ 6ನೇ ತರಗತಿ ಓದುತ್ತಿದ್ದಾರೆ.

ಭಾನುವಾರ ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಮಸರಕಲ್ ಗ್ರಾಮದ ಮರಸಲಿಂಗೇಶ್ವರ ಜಾತ್ರಾ ಮಹೋತ್ಸವದಲ್ಲಿ 50 ಕೆ.ಜಿ.ಧಾನ್ಯದ ಚೀಲ ಎತ್ತುವ ಮೂಲಕ ಅಲ್ಲಿದ್ದವರನ್ನು ನಿಬ್ಬೆರಗಾಗಿಸಿದ್ದಾರೆ. ಅವಳಿ ಸಹೋದರರ ಸಾಧನೆಗೆ ಜಾತ್ರೆಯಲ್ಲಿ ಹರ್ಷೋದ್ಘಾರ ವ್ಯಕ್ತವಾಗಿದೆ.

11 ವರ್ಷದ ಅವಳಿ ಸಹೋದರರಾದ ಅಜಯ್ - ವಿಜಯ್ ತಮ್ಮ ಎಳೆ ವಯಸ್ಸಿನಲ್ಲಿ ಸಾಮರ್ಥ್ಯ ಮೀರಿ 50 ಕೆಜಿ ಭಾರ ಎತ್ತಿದ್ದಾರೆ. ಯುವಕರನ್ನು ನಾಚಿಸುವಂತೆ 50 ಕೆ.ಜಿ. ಭಾರವನ್ನು ಎತ್ತುವಾಗ ತಿಣಕಾಡುವ ಇಂದಿನ ದಿನಮಾನಗಳಲ್ಲಿ 50 ಕೆ.ಜಿ. ಭಾರವನ್ನು ಈ ಅವಳಿ ಸಹೋದರರು, ಸಲೀಸಾಗಿ ಎತ್ತಿ ಭಾರ ಎತ್ತುವ ಕ್ರೀಡೆಯಲ್ಲಿ ಭವಿಷ್ಯದ ಕ್ರೀಡಾಪಟುಗಳ ಭರವಸೆ ಮೂಡಿಸಿದ್ದಾರೆ.

ಅಜಯ್- ವಿಜಯ್ ಅವಳಿ ಸಹೋದರರು, ಫಿಟ್ನೆಸ್​​ಗೆ ಆದ್ಯತೆ ನೀಡುತ್ತಿದ್ದಾರಂತೆ. ದಿನವೂ ಕಸರತ್ತಿನ ವ್ಯಾಯಾಮದಲ್ಲಿ‌ ನಿರತರಾಗಿದ್ದು, ಸದಾ ಲವಲವಿಕೆಯಂದಿದ್ದಾರೆ. ಈ ಅವಳಿ ಸಹೋದರರ ಸಾಹಸ ಪ್ರದರ್ಶನಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

ಇದನ್ನೂ ಓದಿ:ವ್ಯಕ್ತಿಯ ಒಪ್ಪಿಗೆ ಪಡೆಯದೇ ಬಲವಂತದ ಲಸಿಕೆ ಹಾಕುವಂತಿಲ್ಲ: ಸುಪ್ರೀಂಗೆ ಅಫಿಡವಿಟ್​​ ಸಲ್ಲಿಸಿದ ಕೇಂದ್ರ

Last Updated : Jan 17, 2022, 10:04 AM IST

ABOUT THE AUTHOR

...view details