ಗಂಗಾವತಿ: ಮಧ್ವ ಪಂಥದ ಅನುಯಾಯಿಗಳ ಪವಿತ್ರ ಕ್ಷೇತ್ರ ತಾಲೂಕಿನ ಆನೆಗೊಂದಿ ಸಮೀಪದ ತುಂಗಭದ್ರಾ ತಟದಲ್ಲಿರುವ ನವವೃಂದಾವನ ಗಡ್ಡೆಯಲ್ಲಿ ವ್ಯಾಸರಾಜರ 483ನೇ ಆರಾಧನಾ ಮಹೋತ್ಸವ ಆಚರಿಸಲಾಯಿತು. ವಿದ್ಯಾಶ್ರೀ ತೀರ್ಥ ಶ್ರೀಗಳ ನೇತೃತ್ವದಲ್ಲಿ ವೃಂದಾವನಕ್ಕೆ ಪಂಚಾಮೃತ ಅಭಿಷೇಕ ಸೇರಿದಂತೆ ನಾನಾ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಗಂಗಾವತಿ: ನವವೃಂದಾವನ ಗಡ್ಡೆಯಲ್ಲಿ ವ್ಯಾಸರಾಜರ 483ನೇ ಆರಾಧನೆ
ಆರಾಧಾನಾ ಮಹೋತ್ಸವದ ಮಧ್ಯಾರಾಧನೆಯನ್ನು ಸೋಸಲೆಯ ವ್ಯಾಸರಾಜ ಮಠದಿಂದ ಆಯೋಜಿಸಲಾಗಿತ್ತು. ವಿದ್ಯಾಶ್ರೀ ತೀರ್ಥ ಶ್ರೀಗಳ ನೇತೃತ್ವದಲ್ಲಿ ವ್ಯಾಸರಾಜರ ವೃಂದಾವನಕ್ಕೆ ಪಂಚಾಮೃತ ಅಭಿಷೇಕ ಸೇರಿದಂತೆ ನಾನಾ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ನವವೃಂದಾವನ ಗಡ್ಡೆಯಲ್ಲಿ ವ್ಯಾಸರಾಜರ 483ನೇ ಆರಾಧನೆ
ತುಂಗಭದ್ರಾ ನದಿಯ ನಡುಗಡ್ಡೆ ಪ್ರದೇಶದಲ್ಲಿರುವ ವೃಂದಾವನಕ್ಕೆ ತೆರಳಿ ಧಾರ್ಮಿಕ ಕಾರ್ಯಕ್ರಮ ಕೈಗೊಳ್ಳಲು ಸೂಕ್ತ ರಸ್ತೆ ಮಾರ್ಗ ಇಲ್ಲ. ಈ ಮಧ್ಯೆಯೂ, ಸಾವಿರಾರು ಭಕ್ತರು ತೆಪ್ಪ, ಹರಿಗೋಲುಗಳ ಮೂಲಕ ಹೊಸಪೇಟೆ, ಆನೆಗೊಂದಿ ಭಾಗದಿಂದ ನವವೃಂದಾವನ ಗಡ್ಡೆಗೆ ತೆರಳಿ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಾರೆ.