ಕರ್ನಾಟಕ

karnataka

ETV Bharat / state

ಕಾರಟಗಿಯಲ್ಲಿ ಕೆಎಸ್​ಆರ್​ಟಿಸಿ ಬಸ್ ಹರಿದು 40 ಕುರಿಗಳು ಸಾವು - ಕೊಪ್ಪಳದಲ್ಲಿ ಸಾರಿಗೆ ಬಸ್ ಹರಿದು 40 ಕುರಿಗಳು ಸಾವು

ಸಾರಿಗೆ ಸಂಸ್ಥೆಯ ಬಸ್ ಹರಿದು ಸುಮಾರು 40 ಕುರಿಗಳು ಸಾವನ್ನಪ್ಪಿವೆ. ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಚನ್ನಳ್ಳಿ ಕ್ರಾಸ್ ಬಳಿ ಈ ದುರ್ಘಟನೆ ನಡೆದಿದೆ.

40 sheep death in Koppal
ಕೊಪ್ಪಳದಲ್ಲಿ ಸಾರಿಗೆ ಬಸ್ ಹರಿದು 40 ಕುರಿಗಳು ಸಾವು

By

Published : Dec 6, 2019, 3:42 PM IST

ಕೊಪ್ಪಳ:ಸಾರಿಗೆ ಸಂಸ್ಥೆಯ ಬಸ್ ಹರಿದು ಸುಮಾರು 40 ಕುರಿಗಳು ಸಾವನ್ನಪ್ಪಿರುವ ಘಟನೆ ಕಾರಟಗಿ ತಾಲೂಕಿನ ಚನ್ನಳ್ಳಿ ಕ್ರಾಸ್ ಬಳಿ ನಡೆದಿದೆ.

ಕೊಪ್ಪಳದಲ್ಲಿ ಸಾರಿಗೆ ಬಸ್ ಹರಿದು 40 ಕುರಿಗಳು ಸಾವು

ಬೆಳಗಾವಿ ಮೂಲದ ಖಾನಪ್ಪ ಎಂಬುವರಿಗೆ ಸೇರಿದ ಕುರಿಗಳಾಗಿದ್ದು ಸುಮಾರು ಮೂರು ಲಕ್ಷ ಮೌಲ್ಯದವುಗಳಾಗಿವೆ. ಹುಬ್ಬಳ್ಳಿಯಿಂದ ರಾಯಚೂರಿಗೆ ಹೊರಟಿದ್ದ ಬಸ್ ಚನ್ನಳ್ಳಿ ಕ್ರಾಸ್ ಬಳಿ ಕುರಿಗಳ ಹಿಂಡಿನ ಮೇಲೆ ಹರಿದಿದೆ. ಪರಿಣಾಮ 40 ಕುರಿಗಳು ಬಲಿಯಾಗಿವೆ. ಕಾರಟಗಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದಾರೆ.

For All Latest Updates

ABOUT THE AUTHOR

...view details