ಕೊಪ್ಪಳ:ಜಿಲ್ಲೆಯಲ್ಲಿ ಇಂದು 40 ಮಂದಿಗೆ ಕೊರೊನಾ ತಗುಲಿದೆ. ಸೋಂಕಿತರ ಸಂಖ್ಯೆ 13,160ಕ್ಕೆ ಏರಿಕೆಯಾಗಿದೆ.
ಕೊಪ್ಪಳ ಜಿಲ್ಲೆಯಲ್ಲಿ ಇಂದು 40 ಪಾಸಿಟಿವ್ ಪತ್ತೆ.. - ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್
ಇಂದು 60 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈವರೆಗೆ ಒಟ್ಟು 12,311 ಜನರು ಗುಣಮುಖರಾಗಿದ್ದಾರೆ..
![ಕೊಪ್ಪಳ ಜಿಲ್ಲೆಯಲ್ಲಿ ಇಂದು 40 ಪಾಸಿಟಿವ್ ಪತ್ತೆ.. koppal](https://etvbharatimages.akamaized.net/etvbharat/prod-images/768-512-9288070-thumbnail-3x2-brm.jpg)
ಕೊಪ್ಪಳ
ಈ ಕುರಿತು ಮಾಹಿತಿ ನೀಡಿರುವ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಅವರು, ಗಂಗಾವತಿ 09, ಕೊಪ್ಪಳ 21, ಕುಷ್ಟಗಿ 06 ಹಾಗೂ ಯಲಬುರ್ಗಾ ತಾಲೂಕಿನಲ್ಲಿ 04 ಪ್ರಕರಣ ಸೇರಿ ಇಂದು ಒಟ್ಟು 40 ಪಾಸಿಟಿವ್ ಪ್ರಕರಣ ಪತ್ತೆಯಾಗಿರುವುದಾಗಿ ತಿಳಿಸಿದ್ದಾರೆ.
ಇಂದು ಓರ್ವ ಸೋಂಕಿತ ಮೃತಪಟ್ಟಿದ್ದು, ಜಿಲ್ಲೆಯಲ್ಲಿ ಈವರೆಗೆ ಸೋಂಕಿನಿಂದ ಒಟ್ಟು 279 ಜನರು ಮೃತಪಟ್ಟಿದ್ದಾರೆ. ಇಂದು 60 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈವರೆಗೆ ಒಟ್ಟು 12,311 ಜನರು ಗುಣಮುಖರಾಗಿದ್ದಾರೆ. 498 ಜನ ಸೋಂಕಿತರನ್ನು ಹೋಂ ಐಸೋಲೇಷನ್ ಮಾಡಲಾಗಿದೆ ಎಂದು ತಿಳಿಸಿದರು.