ಕರ್ನಾಟಕ

karnataka

ETV Bharat / state

ಕೊಪ್ಪಳ: ಗಮನ ಬೇರೆಡೆ ಸೆಳೆದು 4 ಲಕ್ಷ ರೂಪಾಯಿ ದೋಚಿದ ಕಳ್ಳರು - ಸಿಬಿಎಸ್ ಗಂಜ್

ವ್ಯಕ್ತಿಯ ಗಮನ ಬೇರೆಡೆ ಸೆಳೆದು ನಾಲ್ಕು ಲಕ್ಷ ರೂಪಾಯಿಯ ಬ್ಯಾಗ್​​ ಎಗರಿಸಿ ಕಳ್ಳರು ಪರಾರಿಯಾಗಿದ್ದಾರೆ.

ಗಂಗಾವತಿ ಪೊಲೀಸ್​
ಗಂಗಾವತಿ ಪೊಲೀಸ್​

By

Published : Aug 17, 2021, 9:12 AM IST

ಗಂಗಾವತಿ (ಕೊಪ್ಪಳ): ಬೈಕ್​​​​ನಲ್ಲಿ ಇರಿಸಿದ್ದ ನಾಲ್ಕು ಲಕ್ಷ ರೂಪಾಯಿಯನ್ನುಹಾಡಹಗಲೇ ದೋಚಿರುವ ಕಳ್ಳರು ಪರಾರಿಯದ ಘಟನೆ ನಗರದ ಸಿಬಿಎಸ್ ಗಂಜ್ ಪ್ರದೇಶದಲ್ಲಿ ನಡೆದಿದೆ. ಹಣ ಕಳೆದುಕೊಂಡ ನಾಗೇಶ್ವರರಾವ್ ಎಂಬುವವರು ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ರಾಯಚೂರು-ಕೊಪ್ಪಳ ರಸ್ತೆಯಲ್ಲಿರುವ ಎಸ್​ಬಿಐ ಬ್ಯಾಂಕ್​​​ನಿಂದ ಹಣ ಡ್ರಾ ಮಾಡಿರುವ ನಾಗೇಶ್ವರ್, ಎಪಿಎಂಸಿಯ ಗಂಜ್​​​​ನಲ್ಲಿರುವ ಅಂಗಡಿಯೊಂದರ ಮುಂದೆ ಬೈಕ್ ನಿಲ್ಲಿಸಿದ್ದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಇಬ್ಬರು ಯುವಕರು ಗಮನ ಬೇರೆಡೆ ಸೆಳೆದು ಹಣ ಇದ್ದ ಬ್ಯಾಗ್ ಎಗರಿಸಿದ್ದಾರೆ.

ಇದನ್ನೂ ಓದಿ:ಜೈಲಿಂದಲೇ‌ ಮನೆ ಕಳ್ಳತನ ಪ್ಲಾನ್​​ ಮಾಡುತ್ತಿದ್ದ ಗ್ಯಾಂಗ್ ಅರೆಸ್ಟ್‌: 17ಲಕ್ಷ ಮೌಲ್ಯದ ಚಿನ್ನ ವಶ

ABOUT THE AUTHOR

...view details