ಕುಷ್ಟಗಿ (ಕೊಪ್ಪಳ):ದೇಶದಲ್ಲಿ ಹೆಲ್ಮೆಟ್ ಇಲ್ಲದೇ ಸಂಭವಿಸುವ ರಸ್ತೆ ಅಪಘಾತದಲ್ಲಿ ಗಂಟೆಗೆ ನಾಲ್ವರು ಸಾವನ್ನಪ್ಪುತ್ತಿದ್ದಾರೆ ಎಂದು ಅಗ್ನಿಶಾಮಕ ಠಾಣೆಯ ಅಧಿಕಾರಿ ಎನ್.ರಾಜು ಹೇಳಿದರು.
'ಹೆಲ್ಮೆಟ್ ಇಲ್ಲದೇ ಬೈಕ್ ಸವಾರಿ: ಪ್ರತಿ ಗಂಟೆಗೆ ನಾಲ್ವರು ದುರ್ಮರಣ' ಗೃಹರಕ್ಷಕ ದಳ ಘಟಕದಿಂದ ರಸ್ತೆ ಸುರಕ್ಷಾ ಸಪ್ತಾಹ ಹಿನ್ನೆಲೆಯಲ್ಲಿ ರಸ್ತೆ ಅಪಘಾತಗಳ ಕುರಿತ ಬೈಕ್ ರ್ಯಾಲಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಇದನ್ನೂ ಓದಿ: ಯಡಿಯೂರಪ್ಪ ಚೆಕ್ ಮೂಲಕ ಲಂಚ ಪಡೆದರೆ, ವಿಜಯೇಂದ್ರ RTGS ಗಿರಾಕಿ: ಸಿದ್ದರಾಮಯ್ಯ
ಇಷ್ಟೆಲ್ಲಾ ರಸ್ತೆ ಅಪಘಾತಗಳು ಸಂಭವಿಸುತ್ತಿದ್ದರೂ ಜನರಲ್ಲಿ ಜಾಗೃತಿ ಮೂಡುತ್ತಿಲ್ಲ. ಹೆಲ್ಮೆಟ್ನಿಂದ ಶೇ.75 ಜೀವ ಉಳಿಸಿಕೊಳ್ಳಬಹುದಾಗಿದೆ. ಕೈ-ಕಾಲು ಮುರಿದರೆ ಜೀವನ ಸಾಗಿಸಬಹುದಾಗಿದೆ. ಅದೇ ಜೀವ ಹೋದರೆ, ಏನೂ ಸಾಧಿಸಲು ಸಾದ್ಯವಿಲ್ಲ ಎಂದರು.