ಕರ್ನಾಟಕ

karnataka

ETV Bharat / state

ಗಂಗಾವತಿ: ಸತ್ಯನಾರಾಯಣ ದೇಗುಲದಲ್ಲಿ ರಾಯರ ಮಧ್ಯಾರಾಧನೆ ಮಹೋತ್ಸವ - ರಾಘವೇಂದ್ರ ಸ್ವಾಮೀಜಿಗಳ 349ನೇ ಆರಾಧನಾ ಮಹೋತ್ಸವ

ರಾಘವೇಂದ್ರ ಸ್ವಾಮೀಜಿಗಳ ವೃಂದಾವನಕ್ಕೆ ವಿಶೇಷ ಅಲಂಕಾರ ಮಾಡಿ ಅಭಿಷೇಕ, ಹಸ್ತೋದಕ, ವಿಶೇಷ ಫಲ, ಪಂಚಾಮೃತ ಅಭಿಷೇಕ ನೆರವೇರಿಸಲಾಯಿತು. ದೇಗುಲದ ಮುಖ್ಯ ವ್ಯವಸ್ಥಾಪಕ ಕಲ್ಮಂಗಿ ವಾದಿರಾಜಾಚಾರ್ ನೇತೃತ್ವದಲ್ಲಿ ಸರಕಾರದ ಆದೇಶದನ್ವಯ ಕಾರ್ಯಕ್ರಮಗಳು ನಡೆದವು.

349th Worshipful Jubilee of Raghavendra Swamiji
ಗಂಗಾವತಿ: ಸತ್ಯನಾರಾಯಣ ದೇಗುಲದಲ್ಲಿ ರಾಯರ ಮಧ್ಯರಾಧನೆ ಮಹೋತ್ಸವ

By

Published : Aug 5, 2020, 5:32 PM IST

Updated : Aug 5, 2020, 6:09 PM IST

ಗಂಗಾವತಿ: ಸತ್ಯನಾರಾಯಣ ದೇಗುಲದಲ್ಲಿ ರಾಯರ ಮಧ್ಯಾರಾಧನೆ ಮಹೋತ್ಸವ

ಗಂಗಾವತಿ:ಇಲ್ಲಿನ ಜಯನಗರದಲ್ಲಿರುವ ಸತ್ಯನಾರಾಯಣ ಪೇಟೆಯ ಸತ್ಯನಾರಾಯಣ ದೇವಸ್ಥಾನದಲ್ಲಿ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮೀಜಿಗಳ 349ನೇ ಆರಾಧನಾ ಮಹೋತ್ಸವದ ಅಂಗವಾಗಿ ಬುಧವಾರ ಮಧ್ಯಾರಾಧನೆ ಹಮ್ಮಿಕೊಳ್ಳಲಾಗಿತ್ತು.

ಸತ್ಯನಾರಾಯಣ ದೇವರಿಗೆ ವಿಶೇಷ ಪೂಜೆ, ಅಲಂಕಾರ ಮಾಡಲಾಗಿತ್ತು. ಬಳಿಕ ರಾಘವೇಂದ್ರ ಸ್ವಾಮೀಜಿಗಳ ವೃಂದಾವನಕ್ಕೆ ವಿಶೇಷ ಅಲಂಕಾರ ಮಾಡಿ ಅಭಿಷೇಕ, ಹಸ್ತೋದಕ, ವಿಶೇಷ ಫಲ, ಪಂಚಾಮೃತ ಅಭಿಷೇಕ ನೆರವೇರಿಸಲಾಯಿತು. ದೇಗುಲದ ಮುಖ್ಯ ವ್ಯವಸ್ಥಾಪಕ ಕಲ್ಮಂಗಿ ವಾದಿರಾಜಾಚಾರ್ ನೇತೃತ್ವದಲ್ಲಿ ಸರಕಾರದ ಆದೇಶದನ್ವಯ ಕಾರ್ಯಕ್ರಮಗಳು ನಡೆದವು.

ದೇಗುಲಕ್ಕೆ ಭೇಟಿ ನೀಡಿದ ಭಕ್ತರು ಕಡ್ಡಾಯವಾಗಿ ಮಾಸ್ಕ್ ಧರಿಸಿದ್ದರು. ಮುಂಜಾಗ್ರತಾ ಕ್ರಮವಾಗಿ ಭಕ್ತರ ಮನೆಗೆ ರಾಯರ ಮಂತ್ರಾಕ್ಷತೆ ತಲುಪಿಸಲಾಯಿತು.

Last Updated : Aug 5, 2020, 6:09 PM IST

ABOUT THE AUTHOR

...view details