ಕೊಪ್ಪಳ:ಕೋವಿಡ್ ಎರಡನೇ ಅಲೆ ಹೊಡೆತ ಅನೇಕ ಆರ್ಥಿಕ ಚಟುವಟಿಕೆಗಳು ಸೇರಿದಂತೆ ಜನಜೀವನದ ಮೇಲೆ ಕೆಟ್ಟ ಪರಿಣಾಮ ಬೀರಿದೆ. ಅದರಲ್ಲೂ ಮಣ್ಣಿನ ಮಡಕೆ, ಗಡಿಗೆಗಳನ್ನು ತಯಾರಿಸುವ ಕುಂಬಾರರ ಬದುಕು ಅಡಕತ್ತರಿಯಲ್ಲಿದೆ. ಈಗಾಗಲೇ ತಯಾರಿಸಿದ ಮಡಿಕೆಗಳನ್ನು ಮಾರಾಟಕ್ಕಿಟ್ಟರೂ ವ್ಯಾಪಾರವಾಗದೆ ಮನೆಗೆ ಮರಳುವಂತಾಗಿದೆ.
ಕಳೆದ ವರ್ಷ ಮಾಡಿದ ಮಡಿಕೆ, ಗಡಿಗೆಗಳು ವ್ಯಾಪಾರವಾಗದೇ ಮೂಲೆ ಸೇರಿಕೊಂಡಿವೆ. ಬಡವರ ಫ್ರಿಡ್ಜ್ ಎಂದೇ ಕರೆಯಲ್ಪಡುವ ಮಣ್ಣಿನ ಮಡಿಕೆಗಳ ವ್ಯಾಪಾರ ಬೇಸಿಗೆ ಸಂದರ್ಭದಲ್ಲಿ ಉತ್ತಮವಾಗಿರುತ್ತಿತ್ತು. ಆದರೆ ಕಳೆದ ಬಾರಿಯೂ ಈ ಸಂದರ್ಭದಲ್ಲಿಯೇ ಕೊರೊನಾ ಸೋಂಕಿನ ಭೀತಿಯಿಂದ ಲಾಕ್ಡೌನ್ ಮಾಡಲಾಯಿತು. ಪರಿಣಾಮ, ಕಳೆದ ವರ್ಷ ತಯಾರು ಮಾಡಿದ್ದ ಸ್ಥಳೀಯ ಕುಂಬಾರಿಕೆಯ ಮಣ್ಣಿನ ಗಡಿಗೆ, ಮಡಿಕೆಗಳು ಇನ್ನೂ ಹಾಗೆಯೇ ಉಳಿದುಕೊಂಡಿವೆ ಎನ್ನುತ್ತಾರೆ ಸ್ಥಳೀಯ ಕುಂಬಾರರು.