ಕರ್ನಾಟಕ

karnataka

ETV Bharat / state

ದ್ವಿತೀಯ ಪಿಯು ಫಲಿತಾಂಶ: ಗಂಗಾವತಿಯ ಈ ವಿದ್ಯಾರ್ಥಿ ರಾಜ್ಯಕ್ಕೆ 5ನೇ ಟಾಪರ್​​! - gangavati student news

ವಿದ್ಯಾನಿಕೇತನ ಕಾಲೇಜಿನ ಅಲ್ಲಮಪ್ರಭು ಎಂಬ ವಿದ್ಯಾರ್ಥಿ 592 ಅಂಕ ಪಡೆದು ಕೊಪ್ಪಳಕ್ಕೆ ಮಾತ್ರವಲ್ಲ ಇಡೀ ಕಲ್ಯಾಣ ಕರ್ನಾಟಕಕ್ಕೆ ಟಾಪರ್ ಆಗಿದ್ದಾನೆ. ರಾಜ್ಯದಲ್ಲಿ 595 ಅತ್ಯಧಿಕ ಅಂಕವಾಗಿದೆ.

2nd puc result
ರಾಜ್ಯಕ್ಕೆ ಗಂಗಾವತಿ ವಿದ್ಯಾರ್ಥಿ ನಾಲ್ಕನೇ ಟಾಪರ್

By

Published : Jul 14, 2020, 1:50 PM IST

Updated : Jul 14, 2020, 3:02 PM IST

ಗಂಗಾವತಿ :ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶದಲ್ಲಿ ನಗರದ ವಿದ್ಯಾನಿಕೇತನ ಪಿಯು ಕಾಲೇಜಿನ ವಿದ್ಯಾರ್ಥಿಯೊಬ್ಬ ಇಡೀ ರಾಜ್ಯಕ್ಕೆ 5ನೇ ಟಾಪರ್ ಆಗುವ ಮೂಲಕ ಗಮನ ಸೆಳೆದಿದ್ದಾನೆ.

ಕಾಲೇಜಿನ ಅಲ್ಲಮಪ್ರಭು ಎಂಬ ವಿದ್ಯಾರ್ಥಿ 592 ಅಂಕ ಪಡೆದು ಕೊಪ್ಪಳಕ್ಕೆ ಮಾತ್ರವಲ್ಲ ಇಡೀ ಕಲ್ಯಾಣ ಕರ್ನಾಟಕಕ್ಕೆ ಟಾಪರ್ ಆಗಿದ್ದಾನೆ. ರಾಜ್ಯದಲ್ಲಿ 595 ಅತ್ಯಧಿಕ ಅಂಕವಾಗಿದೆ.

ರಾಜ್ಯಕ್ಕೆ ಗಂಗಾವತಿ ವಿದ್ಯಾರ್ಥಿ 5ನೇ ಟಾಪರ್

ಹತ್ತನೇ ತರಗತಿಯಲ್ಲಿ ಕೂಡ ಈ ವಿದ್ಯಾರ್ಥಿ 485 ಅಂಕ ಪಡೆದು ಹೈಕ ಭಾಗಕ್ಕೆ ಟಾಪರ್ ಆಗಿದ್ದ. ಇದೀಗ ದ್ವಿತೀಯ ಪಿಯುಸಿ ಕನ್ನಡದಲ್ಲಿ 98, ಇಂಗ್ಲಿಷ್​​ 95 ಅಂಕ ಪಡೆದರೆ, ಭೌತಶಾಸ್ತ್ರ, ರಸಾಯನ ಮತ್ತು ಜೀವಶಾಸ್ತ್ರದಲ್ಲಿ ತಲಾ 100 ಅಂಕ ಹಾಗೂ ಗಣಿತದಲ್ಲಿ 99 ಅಂಕ ಪಡೆದು ಒಟ್ಟು 600ಕ್ಕೆ 592 ಅಂಕ ಪಡೆಯುವ ಮೂಲಕ ವಿದ್ಯಾರ್ಥಿ ಈ ಸಾಧನೆ ಮಾಡಿದ್ದಾನೆ.

ರಾಜ್ಯಕ್ಕೆ ಗಂಗಾವತಿ ವಿದ್ಯಾರ್ಥಿ 5ನೇ ಟಾಪರ್
Last Updated : Jul 14, 2020, 3:02 PM IST

ABOUT THE AUTHOR

...view details