ಕೊಪ್ಪಳ: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಕಲ್ಪಿಸುವಂತೆ ಆಗ್ರಹಿಸಿ ನಡೆಯುತ್ತಿರುವ ಬೃಹತ್ ಪಾದಯಾತ್ರೆಯು ಇಂದು ಭಾಗ್ಯನಗರ ಪಟ್ಟಣದ ಮೂಲಕ ಕೊಪ್ಪಳ ನಗರಕ್ಕೆ ಆಗಮಿಸಿತು.
ನಗರದ ಹೊರವಲಯದ ಕುಷ್ಟಗಿ ರಸ್ತೆ ಬಳಿಯ ಪಂಚಮಸಾಲಿ ಕಲ್ಯಾಣ ಮಂಟಪದ ಬಳಿಯಿಂದ ಪಂಚಮಸಾಲಿ ಪೀಠದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮಿಗಳ ನೇತೃತ್ವದಲ್ಲಿ ಸಾವಿರಾರು ಜನರು ಪಾದಯಾತ್ರೆಯಲ್ಲಿ ಪಾಲ್ಗೊಂಡರು.
ಪಾದಯಾತ್ರೆಯಲ್ಲಿ ಸಾವಿರಾರು ಜನರು ಪಾದಯಾತ್ರೆಯಲ್ಲಿ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವಂತೆ ಸಮಾಜದ ಸಾವಿರಾರು ಜನರು ಆಗ್ರಹಿಸಿದರು.
ಇನ್ನು ನಗರದ ಬಸವೇಶ್ವರ ಸರ್ಕಲ್ನಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಶ್ರೀಗಳು ಸೇರಿದಂತೆ ಸಂಸದ ಸಂಗಣ್ಣ ಕರಡಿ, ಮಾಜಿ ಸಂಸದ ಶಿವರಾಮಗೌಡ, ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಸೇರಿದಂತೆ ಅನೇಕ ಮುಖಂಡರು ಮಾತನಾಡಿ, ನಮ್ಮ ಸಮಾಜಕ್ಕೆ 2ಎ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿದರು. ಬಹಿರಂಗ ಸಭೆಯ ಬಳಿಕ ಪಾದಯಾತ್ರೆಯು ಹೊಸಪೇಟೆ ಕಡೆಗೆ ಸಾಗಿತು.