ಕರ್ನಾಟಕ

karnataka

ETV Bharat / state

ಕೊಪ್ಪಳದಲ್ಲಿ 235 ಮಂದಿಯಲ್ಲಿ ಕೊರೊನಾ ಪತ್ತೆ: 6,012ಕ್ಕೇರಿದ ಸೋಂಕಿತರು - ಕೊಪ್ಪಳ ಕೊರೊನಾ ಸುದ್ದಿ

ಕೊಪ್ಪಳ‌ ಜಿಲ್ಲೆಯಲ್ಲಿ ಇಂದು ಹೊಸದಾಗಿ 235 ಕೊರೊನಾ ಪ್ರಕರಣಗಳು ದೃಢಪಟ್ಟಿವೆ. ಗಂಗಾವತಿ ತಾಲೂಕಿನಲ್ಲಿ 88, ಕೊಪ್ಪಳ ತಾಲೂಕಿನಲ್ಲಿ 91, ಕುಷ್ಟಗಿ ತಾಲೂಕಿನಲ್ಲಿ 33 ಹಾಗೂ ಯಲಬುರ್ಗಾ ತಾಲೂಕಿನಲ್ಲಿ 23 ಸೋಂಕು ಕಂಡುಬಂದಿವೆ.

Koppal
Koppal

By

Published : Aug 28, 2020, 10:35 PM IST

ಕೊಪ್ಪಳ:ಜಿಲ್ಲೆಯಲ್ಲಿ ಇಂದು 235 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 6,012ಕ್ಕೆ ಏರಿಕೆಯಾಗಿದೆ.

ಗಂಗಾವತಿ ತಾಲೂಕಿನಲ್ಲಿ 88, ಕೊಪ್ಪಳ ತಾಲೂಕಿನಲ್ಲಿ 91, ಕುಷ್ಟಗಿ ತಾಲೂಕಿನಲ್ಲಿ 33 ಹಾಗೂ ಯಲಬುರ್ಗಾ ತಾಲೂಕಿನಲ್ಲಿ 23 ಪ್ರಕರಣ ಸೇರಿ ಒಟ್ಟು 235 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.

7 ಜನ ಸೋಂಕಿತರು ಸಾವನ್ನಪ್ಪಿದ್ದು ಜಿಲ್ಲೆಯಲ್ಲಿ ಈವರೆಗೆ ಒಟ್ಟು 139 ಜನ ಮೃತಪಟ್ಟಿದ್ದಾರೆ. 186 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ. ಈವರೆಗೆ ಒಟ್ಟು 4,386 ಜನ ಗುಣಮುಖರಾಗಿದ್ದಾರೆ. 1250 ಜನ ಸೋಂಕಿತರನ್ನು ಹೋಂ ಐಸೋಲೇಷನ್‌ ಮಾಡಲಾಗಿದೆ.

ಸಕ್ರಿಯ ಸೋಂಕಿತರಿಗೆ ಕೋವಿಡ್ -19 ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಮಾಹಿತಿ ನೀಡಿದ್ದಾರೆ.

ABOUT THE AUTHOR

...view details