ಕರ್ನಾಟಕ

karnataka

ETV Bharat / state

ಗಂಗಾವತಿಯಿಂದ ಗುಜರಾತ್‌ಗೆ ಅಕ್ರಮ ಸಾಗಣೆ: 220 ಕ್ವಿಂಟಲ್ ಅನ್ನಭಾಗ್ಯ ಅಕ್ಕಿ ವಶ - rice illegally transported from Gangawati to Gujarat

ಗಂಗಾವತಿಯಿಂದ ಗುಜರಾತಿಗೆ ಲಾರಿ ಮೂಲಕ ಅಕ್ರಮವಾಗಿ ಸಾಗಿಸುತ್ತಿದ್ದ ಅಕ್ಕಿಯನ್ನು ಕುಷ್ಟಗಿಯ ಅಹಾರ ಇಲಾಖೆ ವಶಕ್ಕೆ ಪಡೆದಿದೆ.

220 quintals of rice illegally transported from Gangawati to Gujarat
ಗಂಗಾವತಿಯಿಂದ ಗುಜರಾತ್ ಗೆ ಅಕ್ರಮವಾಗಿ ಸಾಗಿಸುತ್ತಿದ್ದ 220 ಕ್ವಿಂಟಲ್ ಅನ್ನಭಾಗ್ಯ ಅಕ್ಕಿ ವಶ

By

Published : Jan 11, 2021, 4:32 PM IST

ಕುಷ್ಟಗಿ (ಕೊಪ್ಪಳ): ಗಂಗಾವತಿಯಿಂದ ಗುಜರಾತಿಗೆ 220 ಕ್ವಿಂಟಲ್ 5.72 ಲಕ್ಷ ರೂ. ಮೌಲ್ಯದ ಅನ್ನಭಾಗ್ಯ ಅಕ್ಕಿಯನ್ನು ಸಾಗಿಸುತ್ತಿದ್ದ ಲಾರಿಯನ್ನು ಕುಷ್ಟಗಿಯ ಅಹಾರ ಇಲಾಖೆ ವಶಕ್ಕೆ ತೆಗೆದುಕೊಂಡಿದೆ.

ಕಳೆದ ಜ.9ರ ಮಧ್ಯರಾತ್ರಿ ಗಂಗಾವತಿಯ ಅನ್ನಭಾಗ್ಯ ಅಕ್ಕಿಯನ್ನು ಲೋಡ್ ಮಾಡಲಾಗಿತ್ತು. ಈ ಲಾರಿ ಕುಷ್ಟಗಿ ಮೂಲಕ ಗುಜರಾತ್ ರಾಜ್ಯದ ಬರಸದ್‌ಗೆ ತೆಗೆದುಕೊಂಡು ಹೋಗುತ್ತಿರುವ ಬಗ್ಗೆ ಇಲಾಖೆ ಅಧಿಕಾರಿಗಳಿಗೆ ಖಚಿತ ಮಾಹಿತಿ ಸಿಕ್ಕಿದೆ. ಇಲಾಖೆಯ ಶಿರಸ್ತೇದಾರ ರಜನೀಕಾಂತ ಕೆಂಗಾರಿ, ಆಹಾರ ನಿರೀಕ್ಷಕ ನಿತಿನ್ ಅಗ್ನಿ ಸದರಿ ಲಾರಿಯನ್ನು ಕ್ಯಾದಿಗುಪ್ಪ ಚೆಕ್ ಪೋಸ್ಟ್‌ನಲ್ಲಿ ವಶಕ್ಕೆ ತೆಗೆದುಕೊಳ್ಳಲಾಯಿತು. ಲಾರಿಯಲ್ಲಿ 220 ಕ್ವಿಂಟಲ್ 50 ಕೆ.ಜಿಯ 440 ಪ್ಲಾಸ್ಟಿಕ್ ಬ್ಯಾಗ್‌ಗಳಿದ್ದವು. ಅಕ್ಕಿಯ ಮೌಲ್ಯ 5.72ಲಕ್ಷರೂ. ಅಂದಾಜಿಸಲಾಗಿದೆ.

ಈ ಪ್ರಕರಣದಲ್ಲಿ ಲಾರಿ ಚಾಲಕ ರಾಜಸ್ಥಾನ ಮೂಲದ ಧನಂಜಯ ಅಲಿಯಾಸ್ ಧನಪಾಲ್ ತಂದೆ ದೇವಜೀ ಪಟೇಲ್, ಶಂಕರಲಾಲ್ ರಾಮಜೀ ಪಟೇಲ್ ವಶಕ್ಕೆ ತೆಗೆದುಕೊಳ್ಳಲಾಗಿದೆ.

ABOUT THE AUTHOR

...view details