ಕರ್ನಾಟಕ

karnataka

ETV Bharat / state

ಕೊಪ್ಪಳ; ಸೋಂಕಿಗೆ ಇಬ್ಬರು ಬಲಿ...14ಕ್ಕೇರಿತು ಮೃತರ ಸಂಖ್ಯೆ! - ಕೊಪ್ಪಳ ಕೊರೊನಾ ನ್ಯೂಸ್

ಇಂದು ಬೆಳಗ್ಗೆ 40 ವರ್ಷದ ಸೋಂಕಿತ ವ್ಯಕ್ತಿ ಸಾವನ್ನಪ್ಪಿದ್ದು, ಮಧ್ಯಾಹ್ನದ ವೇಳೆಗೆ 32 ವರ್ಷದ ವ್ಯಕ್ತಿ ಕೂಡಾ ಸಾವನ್ನಪ್ಪಿದ್ದಾರೆ.

Koppala corona case
Koppala corona case

By

Published : Jul 23, 2020, 5:09 PM IST

ಕೊಪ್ಪಳ: ಕೊರೊನಾ ಸೋಂಕಿಗೆ ಜಿಲ್ಲೆಯಲ್ಲಿ ಇಂದು ಇಬ್ಬರು ಸಾವನ್ನಪ್ಪಿದ್ದು, ಸೋಂಕಿತರ ಸಾವಿನ‌ ಸಂಖ್ಯೆ 14ಕ್ಕೆ ಏರಿಕೆಯಾಗಿದೆ.

ಕೊರೊನಾ ಸೋಂಕು ತಗುಲಿದ್ದ 32 ವರ್ಷದ ವ್ಯಕ್ತಿ (ಕೊಪ್ಪಳದ ನಿವಾಸಿ) ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಂದು ಬೆಳಗ್ಗೆ 40 ವರ್ಷದ ಸೋಂಕಿತ ಸಾವನ್ನಪ್ಪಿದ್ದು, ಮಧ್ಯಾಹ್ನದ ವೇಳೆಗೆ 32 ವರ್ಷದ ವ್ಯಕ್ತಿ ಕೂಡಾ ಸಾವನ್ನಪ್ಪಿದ್ದಾರೆ.

ಈವರೆಗೆ ಒಟ್ಟು 14 ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ. ಸೋಂಕಿಗೆ ಒಳಗಾಗಿ ಮೃತಪಡುತ್ತಿರುವವರ ಸಂಖ್ಯೆ ದಿನೇ-ದಿನೆ ಏರಿಕೆಯಾಗುತ್ತಿದ್ದು, ಜಿಲ್ಲೆಯಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ.

ABOUT THE AUTHOR

...view details