ಕರ್ನಾಟಕ

karnataka

ETV Bharat / state

ಕೊಪ್ಪಳ ಜಿಲ್ಲೆಯಲ್ಲಿಂದು 194 ಕೊರೊನಾ ಪ್ರಕರಣಗಳು ಪತ್ತೆ : ಸೋಂಕಿತರ ಸಂಖ್ಯೆ 8804 ಕ್ಕೆ ಏರಿಕೆ

ಕೊಪ್ಪಳ ಜಿಲ್ಲೆಯಲ್ಲಿ ಇಂದು ಎಷ್ಟು ಜನರಿಗೆ ಸೋಂಕು ತಗುಲಿದೆ, ಎಷ್ಟು ಜನರು ಗುಣಮುಖರಾಗಿದ್ದಾರೆ ಎಂಬುದರ ಕುರಿತ ಮಾಹಿತಿ ಇಲ್ಲಿದೆ.

ಕೊಪ್ಪಳ
ಕೊಪ್ಪಳ

By

Published : Sep 11, 2020, 7:38 PM IST

ಕೊಪ್ಪಳ:ಜಿಲ್ಲೆಯಲ್ಲಿಂದು 194 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 8804 ಕ್ಕೆ ಏರಿಕೆಯಾಗಿದೆ.

ಇಂದಿನ ಕೋವಿಡ್ ವಿವರ:

ಗಂಗಾವತಿ ತಾಲೂಕಿನಲ್ಲಿ- 87, ಕೊಪ್ಪಳ ತಾಲೂಕಿನಲ್ಲಿ 44, ಕುಷ್ಟಗಿ ತಾಲೂಕಿನಲ್ಲಿ 33 ಹಾಗೂ ಯಲಬುರ್ಗಾ ತಾಲೂಕಿನಲ್ಲಿ 30 ಪ್ರಕರಣ ಸೇರಿ ಇಂದು ಒಟ್ಟು 194 ಪ್ರಕರಣಗಳು ಪತ್ತೆಯಾಗಿವೆ.

ಮೃತರ ಮಾಹಿತಿ:

ಇಂದು 3 ಜನರು ಸೋಂಕಿತರು ಸಾವನ್ನಪ್ಪಿದ್ದು, ಜಿಲ್ಲೆಯಲ್ಲಿ ಈವರೆಗೆ ಸೋಂಕಿನಿಂದ ಒಟ್ಟು 204 ಜನ ಸೋಂಕಿತರು ಮೃತಪಟ್ಟಿದ್ದಾರೆ.

ಗುಣಮುಖ:

ಜಿಲ್ಲೆಯಲ್ಲಿಂದು 209 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈವರೆಗೆ ಒಟ್ಟು 6848 ಜನರು ಗುಣಮುಖರಾಗಿದ್ದಾರೆ. 1471 ಜನ ಸೋಂಕಿತರನ್ನು ಹೋಂ ಐಸೋಲೇಷನ್‌ ಮಾಡಲಾಗಿದೆ.

ಇನ್ನುಳಿದ ಪ್ರಕರಣಗಳಿಗೆ ನಿಗದಿತ ಕೋವಿಡ್ -19 ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ತಿಳಿಸಿದ್ದಾರೆ.

ABOUT THE AUTHOR

...view details