ಕೊಪ್ಪಳ:ಮಹಾಮಾರಿ ಕೊರೊನಾ ಸೋಂಕು ತಗುಲಿ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದ 105 ವರ್ಷದ ವೃದ್ಧೆ ಸದ್ಯ ಸಂಪೂರ್ಣ ಗುಣಮುಖರಾಗಿದ್ದಾರೆ.
ಕೊಪ್ಪಳ: ಕೊರೊನಾ ಗೆದ್ದು ಬಂದ 105ರ ವೃದ್ಧೆ! - 105 years old lady recoverd from corona
ಕಾತರಕಿ ಗ್ರಾಮದ 105 ವರ್ಷದ ಕಮಲಮ್ಮ ಲಿಂಗನಗೌಡ ಹಿರೇಗೌಡ್ರ ಅವರಿಗೆ ಕೆಲ ದಿನಗಳ ಹಿಂದೆ ಕೊರೊನಾ ಸೋಂಕು ದೃಢಪಟ್ಟಿದ್ದು, ಹೋಂ ಐಸೋಲೇಶನ್ನಲ್ಲಿದ್ದು ಚಿಕಿತ್ಸೆ ಪಡೆಯುತ್ತಿದ್ದರು. ಸದ್ಯ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿ ಭರವಸೆ ಮೂಡಿಸಿದ್ದಾರೆ.
![ಕೊಪ್ಪಳ: ಕೊರೊನಾ ಗೆದ್ದು ಬಂದ 105ರ ವೃದ್ಧೆ! 105 years old lady recoverd from corona](https://etvbharatimages.akamaized.net/etvbharat/prod-images/768-512-8772563-thumbnail-3x2-koppal.jpg)
ತಾಲೂಕಿನ ಕಾತರಕಿ ಗ್ರಾಮದ 105 ವರ್ಷದ ಕಮಲಮ್ಮ ಲಿಂಗನಗೌಡ ಹಿರೇಗೌಡ್ರ ಅವರಿಗೆ ಕೆಲ ದಿನಗಳ ಹಿಂದೆ ಜ್ವರ ಕಾಣಿಸಿಕೊಂಡಿತ್ತು. ಹೀಗಾಗಿ ಅವರಿಗೆ ಕೊರೊನಾ ಪರೀಕ್ಷೆ ಮಾಡಿಸಿದಾಗ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಆಸ್ಪತ್ರೆಗೆ ಹೋಗಲು ಹಿಂದೇಟು ಹಾಕಿದ್ದು, ಮಗ ಶಂಕರಗೌಡ ಅವರ ಕೊಪ್ಪಳದ ನಿವಾಸದಲ್ಲಿ ಹೋಂ ಐಸೋಲೇಶನ್ನಲ್ಲಿದ್ದು ಚಿಕಿತ್ಸೆ ಪಡೆಯುತ್ತಿದ್ದರು.
ವೃದ್ಧೆಯ ಮೊಮ್ಮಗ ಡಾ. ಶ್ರೀನಿವಾಸ್ ಹ್ಯಾಟಿ ಅಜ್ಜಿಗೆ ಮನೆಯಲ್ಲಿಯೇ ಚಿಕಿತ್ಸೆ ನೀಡಿದ್ದಾರೆ. ಬಳಿಕ ಟೆಸ್ಟ್ ಮಾಡಿಸಿದಾಗ ಕೊರೊನಾ ವರದಿ ನೆಗಟಿವ್ ಬಂದಿದೆ ಎಂದು ಡಾ. ಶ್ರೀನಿವಾಸ್ ಹ್ಯಾಟಿ ತಿಳಿಸಿದ್ದಾರೆ. ಈ ಮೂಲಕ 105ರ ವೃದ್ಧೆ ಕೊರೊನಾ ಗೆದ್ದು ಬಂದು ಭರವಸೆ ಮೂಡಿಸಿದ್ದಾರೆ.