ಗಂಗಾವತಿ: ಕೇವಲ ಒಂದು ವಾರದ ಹಿಂದಷ್ಟೇ ಆರಂಭವಾಗಿದ್ದ ಗಂಗಾವತಿ-ಹುಬ್ಬಳ್ಳಿ ಮಾರ್ಗದ ಪ್ಯಾಸೆಂಜರ್ ರೈಲು ಸಂಚಾರವನ್ನು ಮುಂದಿನ 10 ದಿನಗಳ ಕಾಲ ಸ್ಥಗಿತಗೊಳಿಸುವುದಾಗಿ ರೈಲ್ವೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
10 ದಿನಗಳ ಕಾಲ ಗಂಗಾವತಿ-ಹುಬ್ಬಳ್ಳಿ ಪ್ಯಾಸೆಂಜರ್ ರೈಲು ಸಂಚಾರ ಸ್ಥಗಿತ - Gangavathi-Hubli passenger train services stopped
ತಾಂತ್ರಿಕ ಕಾರಣದ ಹಿನ್ನೆಲೆ ಮುಂದಿನ 10 ದಿನಗಳವರೆಗೆ ಗಂಗಾವತಿ-ಹುಬ್ಬಳ್ಳಿ ಪ್ಯಾಸೆಂಜರ್ ರೈಲು ಸೇವೆಯನ್ನು ಸ್ಥಗಿತಗೊಳಿಸುತ್ತಿರುವುದಾಗಿ ದಕ್ಷಿಣ ನೈಋತ್ಯ ವಲಯದ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ..
ಗಂಗಾವತಿ-ಹುಬ್ಬಳ್ಳಿ ಪ್ಯಾಸೆಂಜರ್ ರೈಲು
ಕೋವಿಡ್ ಕಾರಣದಿಂದ ಸುದೀರ್ಘ ಹತ್ತು ತಿಂಗಳ ಕಾಲ ಸ್ಥಗಿತವಾಗಿದ್ದ ರೈಲು ಸೇವೆ ಕೇವಲ ಒಂದು ವಾರದ ಹಿಂದಷ್ಟೇ ಆರಂಭವಾಗಿತ್ತು. ಇದರಿಂದಾಗಿ ಪ್ರಯಾಣಿಕರಿಗೆ ಮತ್ತು ವರ್ತಕರಿಗೆ ಹೆಚ್ಚು ಅನುಕೂಲವಾಗಿತ್ತು. ಆದರೆ, ಇದೀಗ ಮತ್ತೆ ರೈಲು ಸಂಚಾರ ಸ್ಥಗಿತಗೊಳಿಸಿರುವುದರಿಂದ ಸಂಕಷ್ಟ ಎದುರಿಸುವಂತಾಗಿದೆ.
ತಾಂತ್ರಿಕ ಕಾರಣದ ಹಿನ್ನೆಲೆ ಮುಂದಿನ 10 ದಿನಗಳವರೆಗೆ ಗಂಗಾವತಿ-ಹುಬ್ಬಳ್ಳಿ ಪ್ಯಾಸೆಂಜರ್ ರೈಲು ಸೇವೆಯನ್ನು ಸ್ಥಗಿತಗೊಳಿಸುತ್ತಿರುವುದಾಗಿ ದಕ್ಷಿಣ ನೈಋತ್ಯ ವಲಯದ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.