ಕೋಲಾರ:ಸ್ನೇಹಿತರೊಂದಿಗೆ ಬಾವಿಯಲ್ಲಿ ಈಜಲು ತೆರಳಿದ್ದ ಯುವಕ ನೀರುಪಾಲಾಗಿರುವ ಘಟನೆ ನಡೆದಿದೆ. ತಾಲೂಕಿನ ವಕ್ಕಲೇರಿ ಗ್ರಾಮದ ಬಳಿ ಈ ಘಟನೆ ಜರುಗಿದ್ದು, ತಮಿಳುನಾಡು ಮೂಲದ ಅಜಿತ್ (23) ಮೃತಪಟ್ಟಿದ್ದಾನೆ.
ಬಾವಿಯಲ್ಲಿ ಈಜಲು ತೆರಳಿದ್ದ ಯುವಕ ನೀರುಪಾಲು - Markandeeshwara Temple
ಇಲ್ಲಿನ ದೇವಾಲಯ ನಿರ್ಮಾಣ ಕಾರ್ಯಕ್ಕೆ ತಮಿಳುನಾಡಿನಿಂದ ಆಗಮಿಸಿದ್ದ ಯುವಕ ಬಾವಿಯಲ್ಲಿ ಈಜಲು ತೆರಳಿ ಸಾವನಪ್ಪಿದ್ದಾನೆ. ಅಗ್ನಿಶಾಮಕದಳ ಸಿಬ್ಬಂದಿ ಮೃತದೇಹ ಹೊರತೆಗೆದಿದ್ದಾರೆ.
ಸ್ನೇಹಿತರ ಜೊತೆ ಬಾವಿಯಲ್ಲಿ ಈಜಲು ತೆರಳಿದ್ದ ಯುವಕ ನೀರುಪಾಲು
ಈತ ಗಾರೆ ಕೆಲಸ ಮಾಡುತ್ತಿದ್ದು, ಇಲ್ಲಿನ ವಕ್ಕಲೇರಿ ಬಳಿ ಇರುವ ಮಾರ್ಕಂಡೇಶ್ವರ ದೇವಾಲಯದ ಕಾಮಗಾರಿಗೆಂದು ಕೋಲಾರಕ್ಕೆ ಆಗಮಿಸಿದ್ದ. ದೇವಾಲಯದ ದ್ವಾರ ಬಾಗಿಲು ನಿರ್ಮಾಣದ ಕೆಲಸ ಮುಗಿಸಿ ಸ್ನೇಹಿತರೊಂದಿಗೆ ಬಾವಿಯೊಂದರಲ್ಲಿ ಈಜಲು ತೆರಳಿದ್ದು, ಈ ವೇಳೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.
ಸ್ಥಳಕ್ಕೆ ಭೇಟಿ ನೀಡಿದ ಅಗ್ನಿಶಾಮಕದಳ ಸಿಬ್ಬಂದಿ ಮೃತ ದೇಹವನ್ನು ಹೊರತೆಗೆದು, ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಕೋಲಾರ ಗ್ರಾಮಾಂತರ ಠಾಣಾ ಪೊಲೀಸರು ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.