ಕೋಲಾರ ;ನಗರದಲ್ಲಿ ಹೆಚ್ಚುತ್ತಿರುವ ಪುಂಡ ಪೋಕರಿಗಳು, ಪೋಲಿ ಹುಡುಗರಿಂದ ಮಹಿಳೆಯರಿಗೆ, ಮಕ್ಕಳಿಗೆ ವಿಶೇಷ ರಕ್ಷಣೆ ನೀಡುವ ಉದ್ದೇಶದಿಂದ, ಮಹಿಳಾ ಕಾಲೇಜು, ದೇವಸ್ಥಾನದಂತಹ ಪ್ರದೇಶದಲ್ಲಿ ರಕ್ಷಣೆಗಾಗಿ ಪುರುಷ ಪೊಲೀಸರಂತೆಯೇ ಇನ್ನು ಮುಂದೆ ಕಮ್ಯಾಂಡೋ ರೀತಿಯಲ್ಲಿ (ಕೋಲಾರಮ್ಮ ಪಡೆ) ಮಹಿಳಾ ಪೊಲೀಸರ ತಂಡವೊಂದು ಜಿಲ್ಲೆಯಲ್ಲಿ ಕೆಲಸ ಮಾಡಲಿದೆ ಎಂದು ಕೇಂದ್ರ ವಲಯದ ಐ ಜಿ . ಕೆ.ವಿ.ಶರತ್ ಚಂದ್ರ ಹೇಳಿದ್ದಾರೆ.
ಪುಂಡ,ಪೋಕರಿಗಳೇ ಎಚ್ಚರ..! ಚಿನ್ನದ ನಗರಿಯಲ್ಲಿ ಬರಲಿದೆ ಕೋಲಾರಮ್ಮ ಪಡೆ.. - ಐ ಜಿ . ಕೆ.ವಿ.ಶರತ್ ಚಂದ್ರ
ಕೋಲಾರ ನಗರದಲ್ಲಿ ಹೆಚ್ಚುತ್ತಿರುವ ಪುಂಡ ಪೋಕರಿಗಳು, ಪೋಲಿ ಹುಡುಗರಿಂದ ಮಹಿಳೆಯರಿಗೆ, ಮಕ್ಕಳಿಗೆ ವಿಶೇಷ ರಕ್ಷಣೆ ನೀಡುವ ಉದ್ದೇಶದಿಂದ, ಮಹಿಳಾ ಕಾಲೇಜು, ದೇವಸ್ಥಾನದಂತಹ ಪ್ರದೇಶದಲ್ಲಿ ರಕ್ಷಣೆಗಾಗಿ ನಗರದಲ್ಲಿ ಪುರುಷ ಪೊಲೀಸರಂತೆಯೇ ಇನ್ನು ಮುಂದೆ ಕಮ್ಯಾಂಡೋ ರೀತಿಯಲ್ಲಿ (ಕೋಲಾರಮ್ಮ ಪಡೆ) ಮಹಿಳಾ ಪೊಲೀಸರ ತಂಡವೊಂದು ಜಿಲ್ಲೆಯಲ್ಲಿ ಕೆಲಸ ಮಾಡಲಿದೆ ಎಂದು ಕೇಂದ್ರ ವಲಯದ ಐ ಜಿ . ಕೆ.ವಿ.ಶರತ್ ಚಂದ್ರ ಹೇಳಿದ್ದಾರೆ.

ನಗರದ ಗಲ್‍ಪೇಟೆಯಲ್ಲಿ ನೂತನ ಕೋಲಾರಮ್ಮ ಪಡೆ ಮತ್ತು ಪೊಲೀಸ್ ಫಾರ್ಮಸಿ ಉದ್ಘಾಟನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಮಹಿಳೆಯರು, ಮಕ್ಕಳಿಗೆ ವಿಶೇಷ ರಕ್ಷಣೆ ನೀಡುವ ಉದ್ದೇಶದಿಂದ, ಮಹಿಳಾ ಕಾಲೇಜು, ದೇವಸ್ಥಾನದಂತ ಪ್ರದೇಶದಲ್ಲಿ ಮಹಿಳೆಯರ ರಕ್ಷಣೆಗಾಗಿ ಹಾಗೂ ನಗರದಲ್ಲಿ ಪುರುಷ ಪೊಲೀಸರಂತೆಯೇ ಮಹಿಳೆಯರೂ ಕೂಡಾ, ಪೆಟ್ರೋಲಿಂಗ್, ಬೀಟ್, ಚೀತಾ ರೌಂಡ್ಸ್ ಮಾಡುವಂತೆ ಈ ತಂಡ ಕೆಲಸ ಮಾಡಲಿದೆ ಎಂದು ಹೇಳಿದ್ದಾರೆ.
ಕೋಲಾರಮ್ಮ ಪಡೆ ನಗರವನ್ನ ಕಾಪಾಡುವ ಮಾದರಿಯಲ್ಲೆ ಜಿಲ್ಲೆಯ ಮಹಿಳೆಯರನ್ನ ಪುಂಡ- ಪೋಕರಿಗಳು, ಸರ ಕದಿಯುವವರಿಂದ ರಕ್ಷಣೆ ಮಾಡಲಿದೆ. 46 ಮಹಿಳಾ ಪೊಲೀಸರಿಗೆ ಈಗಾಗಲೇ ವಿಶೇಷ ತರಭೇತಿ ನೀಡಿದ್ದು, ಜಿಲ್ಲೆಯಲ್ಲಿ ಮಹಿಳೆಯರ ವಿಶೇಷ ತಂಡ ಸಿದ್ದವಾಗಿದೆ, ಹಾಗೆಯೇ ಜಿಲ್ಲಾ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಹಾಗೂ ಅಧಿಕಾರಿಗಳ ಆರೋಗ್ಯ ದೃಷ್ಠಿಯಿಂದ ಔಷಧಾಲಯ ಕೂಡ ತೆರೆಯಲಾಯಿತು. ಇದೆ ವೇಳೆ ಎಸ್ಪಿ ಕಾರ್ತಿಕ್ ರೆಡ್ಡಿ, ಎಎಸ್ಪಿ ಜಾನವಿ ಸೇರಿದಂತೆ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.