ಕೋಲಾರ: ಬೆಂಗಳೂರಿನಿಂದ ಹರಿದು ಬರುವ ತ್ಯಾಜ್ಯ ನೀರನ್ನು ಸಂಸ್ಕರಿಸಿ ಜಿಲ್ಲೆಯ ಕೆರೆಗಳಿಗೆ ಹರಿಸುವ ಕೆಸಿ ವ್ಯಾಲಿ ಯೋಜನೆಯನ್ನು ತಂದವರಾರು ಅನ್ನೋ ಪ್ರಶ್ನೆ ಇನ್ನೂ ಹಾಗೆ ಇದೆ.ಜಿಲ್ಲೆಯಲ್ಲಿ ಕುಸಿದಿರುವ ಅಂತರ್ಜಲ ಮಟ್ಟವನ್ನು ಸುಧಾರಣೆ ಮಾಡುವಲ್ಲಿ ಈ ಯೋಜನೆಯದು ಬಹು ಮುಖ್ಯಪಾತ್ರವಿದೆ. ಹಾಗಾಗಿ ಇದೀಗ ಲೋಕಸಭಾ ಚುನಾವಣೆ ನಡೆಯುತ್ತಿದ್ದು, ಈ ಯೋಜನೆಯ ರೂವಾರಿ ಯಾರು ಅನ್ನೋದು ಈಗ ಜಿಲ್ಲೆಯ ಮತದಾರರಲ್ಲಿ ಕಾಡಲಾಂಭಿಸಿದೆ.
ಚುನಾವಣೆಯ ಅಸ್ತ್ರವಾಯ್ತು ಕೆಸಿ ವ್ಯಾಲಿ ಯೋಜನೆ : ಇದರ ರೂವಾರಿ ಯಾರು? - etv bharat
ಒಂದೆಡೆ ಕೋಲಾರದಲ್ಲಿ ಲೋಕಸಭಾ ಚುನಾವಣಾ ಬಿಸಿ ತಾರಕಕ್ಕೇರುತ್ತಿದ್ದು, ಮತ್ತೊಂದೆಡೆ ಶಾಶ್ವತ ನೀರಾವರಿಗಾಗಿ ನಡೆಸಿದ ಹೋರಾಟದ ಕಾವು ಸಹ ಹೆಚ್ಚಾಗುತ್ತಿದೆ.
ಸತತ ಏಳು ಬಾರಿ ಗೆಲುವು ದಾಖಲಿಸಿ ಎಂಟನೇ ಗೆಲುವಿಗಾಗಿ ಚುನಾವಣಾ ಕಣದಲ್ಲಿರುವ ಹಾಲಿ ಸಂಸದ ಕೆ.ಹೆಚ್. ಮುನಿಯಪ್ಪನವರಾ? ಅಥವಾ ವಿಧಾನಸಭಾ ಸ್ಪೀಕರ್ ಆಗಿರುವ ರಮೇಶ್ ಕುಮಾರ್ ಅವರೇ?ಒಂದೆಡೆ ಕೆ.ಹೆಚ್. ಮುನಿಯಪ್ಪ, ಇದು ನಾನೇ ಮಾಡಿದ್ದು, ಇದರ ಮುಖ್ಯ ರೂವಾರಿ ನಾನೇ ಎಂದು ಹೇಳಿತ್ತಿದ್ದರೆ, ಮತ್ತೊಂದೆಡೆ ಈ ಯೋಜನೆಯನ್ನು ಜಾರಿಗೆ ತರುವಲ್ಲಿ ಮುನಿಯಪ್ಪನವರ ಪಾತ್ರ ಶೂನ್ಯ. ಇದನ್ನು ಜಿಲ್ಲೆಗೆ ತಂದಿದ್ದು ಸ್ಪೀಕರ್ ರಮೇಶ್ ಕುಮಾರ್ ಎಂದು ಹೇಳಲಾಗುತ್ತಿದೆ.
ಚುನಾವಣಾ ಸಂದರ್ಭದಲ್ಲಿ ಜಿಲ್ಲೆಯ ಮಹತ್ವದ ಯೋಜನೆ ಕೆಸಿ ವ್ಯಾಲಿ ಯೋಜನೆ ಲಾಭ ಪಡೆಯಲು ಕಾಂಗ್ರೆಸ್ ಅಭ್ಯರ್ಥಿ ಹವಣಿಸುತ್ತಿದ್ದರೆ, ಅವರ ವಿರೋಧಿ ಬಣದ ನಾಯಕರುಗಳು ಅಲ್ಲಲ್ಲಿ ಕಾಲೆಳೆಯುತ್ತಿದ್ದಾರೆ. ಈ ಮೂಲಕ ಯೋಜನೆಯ ಶ್ರಮದ ಫಲ ಯಾರದ್ದು ಅನ್ನೋದೆ ಸದ್ಯ ಚುನಾವಣೆಯಲ್ಲಿ ಬಹು ಚರ್ಚಿತ ವಿಷಯವಾಗಿದೆ.