ಕರ್ನಾಟಕ

karnataka

ETV Bharat / state

ಸ್ವಯಂ ನಿವೃತ್ತಿ ಘೋಷಿಸಿ ತಾಯ್ನಾಡಿಗೆ ಬಂದ ವೀರ ಯೋಧರಿಗೆ ಅದ್ಧೂರಿ ಸ್ವಾಗತ - kolar news

22 ವರ್ಷಗಳ ಸಾರ್ಥಕ ದೇಶ ಸೇವೆ ಮಾಡಿ ಸ್ವಯಂ ನಿವೃತ್ತಿ ತೆಗೆದುಕೊಂಡು ತಾಯ್ನಾಡಿಗೆ ಮರಳಿದ ಯೋಧರಿಬ್ಬರಿಗೆ ಕೋಲಾರದ ಜನ ಪ್ರೀತಿಯಿಂದ ಸ್ವಾಗತ ನೀಡಿದರು.

ವೀರ ಯೋಧರಿಗೆ ಅದ್ಧೂರಿ ಸ್ವಾಗತ

By

Published : Oct 6, 2019, 3:13 PM IST

ಕೋಲಾರ:ದೇಶದ ರಕ್ಷಣೆಯಲ್ಲಿ ಸುಮಾರು 22 ವರ್ಷಗಳ ಸಾರ್ಥಕ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಹೊಂದಿ ತವರಿಗೆ ಮರಳಿದ ಇಬ್ಬರು ಯೋಧರಿಗೆ ಕೋಲಾರದ ಜನತೆ ಅದ್ದೂರಿ ಸ್ವಾಗತ ಕೋರಿದರು.

ವೀರ ಯೋಧರಿಗೆ ಅದ್ಧೂರಿ ಸ್ವಾಗತ

ಸೇನೆಯಲ್ಲಿ ಸೇವೆ ಸಲ್ಲಿಸಿ ಬಂದ ಯೋಧರಾದ ಕೋಲಾರ ತಾಲೂಕಿನ ತೊಂಡಾಲ ಮತ್ತು ಮಿಟ್ಟೂರು ಗ್ರಾಮದ ಕೃಷ್ಣೇಗೌಡ ಹಾಗೂ ಆಂಜಿನಪ್ಪ ಅವರಿಗೆ ನಗರದ ಸರ್ವಜ್ಞ ಪಾರ್ಕ್ ಬಳಿ ಸಾರ್ವಜನಿಕರು ಹೂಮಾಲೆ ಹಾಕಿ ಸನ್ಮಾನಿಸಿ, ಮೆರವಣಿಗೆ ಮಾಡಿದರು.

ನಿವೃತ್ತ ಯೋಧರು ಜಮ್ಮು ಕಾಶ್ಮೀರ, ಕಾಂಗೋ, ವಿಶ್ವ ಶಾಂತಿ ಸೇನಾ ಪಡೆ, ಛತ್ತೀಸ್‌ಗಡ್ ನಕ್ಸಲ್ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸಿದ್ದು, ಭಾರತ ಸೇನೆಗೆ ಅವಶ್ಯಕತೆ ಬಿದ್ದಲ್ಲಿ, ದೇಶ ಸೇವೆಗಾಗಿ ಕರೆ ಬಂದಲ್ಲಿ ನಾವು ಯಾವಾಗಲೂ ಸಿದ್ದರಿದ್ದೇವೆ ಎಂದರು. ಅಲ್ಲದೇ ಸೇವೆ ನಂತರ ತವರಿಗೆ ಮರಳಿದ ಯೋಧರನ್ನು ಸನ್ಮಾನಿಸಿದ ಸಾರ್ವಜನಿಕರಿಗೆ ಧನ್ಯವಾದಗಳನ್ನು ತಿಳಿಸಿದರು.

ABOUT THE AUTHOR

...view details