ಕೋಲಾರ:ನೀರಿನ ಟ್ಯಾಂಕ್ ಬಿದ್ದು ವೃದ್ಧನೊಬ್ಬ ಮೃತಪಟ್ಟಿರುವ ಘಟನೆ ಬಂಗಾರಪೇಟೆ ತಾಲೂಕಿನ ಮರಗಲ್ ಗ್ರಾಮದಲ್ಲಿ ನಡೆದಿದೆ.
ಕೋಲಾರದಲ್ಲಿ ಗಾಳಿ ಮಳೆಗೆ ನೀರಿನ ಟ್ಯಾಂಕ್ ಬಿದ್ದು ವೃದ್ಧ ಸಾವು - ಬಂಗಾರಪೇಟೆ ತಾಲೂಕಿನ ಮರಗಲ್ ವೃದ್ಧ ಸಾವು ವೃದ್ಧ ಸಾವುಗ್ರಾಮದಲ್ಲಿ
ಬಿರುಗಾಳಿ ಸಹಿತ ಸುರಿದ ಭಾರಿ ಮಳೆಗೆ ನೀರಿನ ಓವರ್ಹೆಡ್ ಟ್ಯಾಂಕ್ ಬಿದ್ದು ವೃದ್ಧನೊಬ್ಬ ಮೃತಪಟ್ಟಿದ್ದಾರೆ. ಬಂಗಾರಪೇಟೆ ತಾಲೂಕಿನ ಮರಗಲ್ ಗ್ರಾಮದಲ್ಲಿ ಈ ದುರಂತ ನಡೆದಿದೆ.

ಕೋಲಾರದಲ್ಲಿ ನೀರಿನ ಟ್ಯಾಂಕ್ ಬಿದ್ದು ವೃದ್ಧ ಸಾವು
ಮರಗಲ್ ಗ್ರಾಮದ ಮುನಿ ವೆಂಕಟಪ್ಪ (60) ಎಂಬುವರು ಮೃತ ವ್ಯಕ್ತಿ. ಓವರ್ ಹೇಡ್ ನೀರಿನ ಟ್ಯಾಂಕ್ ಶಿಥಿಲಾವಸ್ಥೆಗೆ ತಲುಪಿದ್ದು, ಈಗಾಗಲೇ ತೆರವುಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದ್ದರು. ಕಳೆದ ಆರು ತಿಂಗಳ ಹಿಂದೆಯೇ ಗ್ರಾಮ ಪಂಚಾಯಿತಿಗೆ ಮನವಿ ಮಾಡಿದ್ದರು. ಇದನ್ನು ಗಂಭೀರವಾಗಿ ತೆಗೆದುಕೊಳ್ಳದೆ ನಿರ್ಲಕ್ಷ್ಯ ವಹಿಸಿದ್ದರು.
ಇಂದು ಬಿರುಗಾಳಿ ಸಹಿತ ಭಾರಿ ಮಳೆಗೆ ಟ್ಯಾಂಕ್ ಬಿದ್ದು ವೃದ್ಧ ಮೃತಪಟ್ಟಿದ್ದಾರೆ. ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಹಾಗೂ ಕುಟುಂಬದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.