ಕರ್ನಾಟಕ

karnataka

ETV Bharat / state

ಕೆ.ಸಿ.ವ್ಯಾಲಿ ಯೋಜನೆಯಲ್ಲಿ ನೀರು ಪೋಲು: ಅಧಿಕಾರಿಗಳ ವಿರುದ್ಧ ಸ್ಥಳೀಯರ ಆಕ್ರೋಶ - ಕೋಲಾರ

ಕೋಲಾರ ತಾಲೂಕಿನ ಚಿಟ್ನಹಳ್ಳಿ ಗ್ರಾಮದ ಬಳಿ ಕೆ.ಸಿ.ವ್ಯಾಲಿ ನೀರು ಪೂರೈಕೆಯ ಗೇಟ್ ಪೈಪ್ ಹೊಡೆದು ಹೋಗಿದೆ.

Water spill in KC Valley project
ಕೆ.ಸಿ.ವ್ಯಾಲಿ ಯೋಜನೆಯಲ್ಲಿ ನೀರು ಪೋಲು

By

Published : Jun 30, 2020, 12:12 PM IST

ಕೋಲಾರ: ಅನೇಕ ವಿಘ್ನಗಳ ನಡುವೆ ಚಾಲನೆ ನೀಡಲಾಗಿದ್ದ ಕೆ.ಸಿ.ವ್ಯಾಲಿ (ಕೋರಮಂಗಲ-ಚಲ್ಲಘಟ್ಟ ಕಣಿವೆ) ಯೋಜನೆಯಲ್ಲಿ ನೀರು ಪೋಲಾಗುತ್ತಿದ್ದು ಅಧಿಕಾರಿಗಳು ಗಮನಹರಿಸದೆ ಬೇಜವಾಬ್ದಾರಿತನ ತೋರಿಸುತ್ತಿರುವುದು ಸ್ಥಳೀಯರ ಕೆಂಗಣ್ಣಿಗೆ ತುತ್ತಾಗಿದೆ.

ಕೋಲಾರ ತಾಲೂಕಿನ ಚಿಟ್ನಹಳ್ಳಿ ಗ್ರಾಮದ ಬಳಿ ಕೆ.ಸಿ.ವ್ಯಾಲಿ ನೀರು ಪೂರೈಕೆಯ ಗೇಟ್ ಪೈಪ್ ಹೊಡೆದು ಹೋಗಿದೆ. ಕಳೆದ ರಾತ್ರಿಯಿಂದಲೂ‌ ನೀರು ವ್ಯರ್ಥವಾಗುತ್ತಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.

ಜಿಲ್ಲೆಯಲ್ಲಿ ಅಂತರ್ಜಲ ಮಟ್ಟವನ್ನು ಹೆಚ್ಚಿಸುವ ಸಲುವಾಗಿ ಅನೇಕ ಕೆರೆಗಳಿಗೆ ಕೆ.ಸಿ.ವ್ಯಾಲಿ ನೀರು ಹರಿಸಲಾಗುತ್ತಿದೆ. ಈ ನೀರನ್ನು ರೈತರು ಬಳಕೆ ಮಾಡಿಕೊಂಡರೆ ಕ್ರಿಮಿನಲ್ ಕೇಸ್ ದಾಖಲಿಸುವುದಾಗಿ ಹೇಳುವ ಅಧಿಕಾರಿಗಳು, ಹೀಗೆ ನೀರು ಪೋಲಾಗುತ್ತಿದ್ದರೂ ದುರಸ್ಥಿ ಮಾಡದೆ ಸುಮ್ಮನಿದ್ದಾರೆ ಅನ್ನೋದು ಸ್ಥಳೀಯರು ಆಕ್ರೋಶ.

ABOUT THE AUTHOR

...view details