ಕೋಲಾರ :ಐಸೋಲೇಷನ್‌ನಲ್ಲಿದ್ದ 18 ಜನರನ್ನ ಮೊರಾರ್ಜಿ ದೇಸಾಯಿ ಹಾಸ್ಟೆಲ್‌ನಲ್ಲಿ ಕ್ವಾರಂಟೈನ್ ಮಾಡುವ ವದಂತಿ ಕೇಳಿ ಬಂದ ಹಿನ್ನೆಲೆ ಅದನ್ನು ವಿರೋಧಿಸಿ ಅಕ್ಕಪಕ್ಕದ ಗ್ರಾಮಸ್ಥರು ಕೋಲಾರದಲ್ಲಿ ಪ್ರತಿಭಟನೆ ನಡೆಸಿದ್ರು. ನಗರದ ಹೊರವಲಯದ ಗಾಜಲದಿನ್ನೆ ಗ್ರಾಮದ ಬಳಿ ಮೊರಾರ್ಜಿ ದೇಸಾಯಿ ಹಾಸ್ಟೆಲ್ಗೆ ಹೋಗುವ ರಸ್ತೆಗೆ ಮುಳ್ಳಿನ ಗಿಡಗಳನ್ನ ಹಾಕಿ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ರು.
ಕ್ವಾರಂಟೈನ್ನಲ್ಲಿರುವವರನ್ನ ಹಾಸ್ಟೆಲ್ಗೆ ಸ್ಥಳಾಂತರದ ವದಂತಿ.. ಆಕ್ರೋಶಗೊಂಡ ಜನರಿಂದ ಪ್ರತಿಭಟನೆ - ಕೋಲಾರ ಕೊರೊನಾ ಸುದ್ದಿ
ನಗರದ ಹೊರವಲಯದ ಗಾಜಲದಿನ್ನೆ ಗ್ರಾಮದ ಬಳಿ ಮೊರಾರ್ಜಿ ದೇಸಾಯಿ ಹಾಸ್ಟೆಲ್ಗೆ ಹೋಗುವ ರಸ್ತೆಗೆ ಮುಳ್ಳಿನ ಗಿಡಗಳನ್ನ ಹಾಕಿ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ರು.
ಪ್ರತಿಭಟನೆ ನಡೆಸಿದ ಗ್ರಾಮಸ್ಥರು
ಗ್ರಾಮದ ಸುತ್ತಮುತ್ತ ಹಾಗೂ ಇಲ್ಲಿನ ವಸತಿ ನಿಲಯದಲ್ಲಿ ಕ್ವಾರಂಟೈನ್ ಮಾಡಬಾರದು ಎಂದು ವಿರೋಧ ವ್ಯಕ್ತಪಡಿಸಿದ್ರು. ಮುಂಬೈ ಮತ್ತು ದೆಹಲಿಯಿಂದ ಬಂದಿದ್ದ 18 ಜನ ಮುಸ್ಲಿಂ ಧರ್ಮಪ್ರಚಾರಕರನ್ನ ಐಸೋಲೇಷನ್ ಮಾಡುವ ವದಂತಿ ಹಬ್ಬಿದ ಹಿನ್ನೆಲೆ ಗ್ರಾಮಸ್ಥರು ಆಕ್ರೋಶಗೊಂಡಿದ್ದಾರೆ. ಸ್ಥಳಕ್ಕೆ ಕೋಲಾರ ನಗರ ಠಾಣಾ ಪೊಲೀಸರು ಭೇಟಿ ನೀಡಿದ್ದಾರೆ.