ಕೋಲಾರ:ರಾಜ್ಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಮಾಜಿ ಸಚಿವ ವರ್ತೂರು ಪ್ರಕಾಶ್ ಅಪಹರಣ ಪ್ರಕರಣ ಬಹುತೇಕ ಸುಖಾಂತ್ಯ ಕಂಡಿದೆ. ಪ್ರಕರಣದ ಸಂಬಂಧ ಕಿಂಗ್ಪಿನ್ ಕವಿರಾಜ್ ಸೇರಿದಂತೆ ಆರು ಮಂದಿಯನ್ನು ಬಂಧಿಸಲಾಗಿದ್ದು, ಒಬ್ಬ ಆರೋಪಿ ನಾಪತ್ತೆಯಾಗಿದ್ದಾನೆ. ಶ್ರೀಘ್ರದಲ್ಲಿ ಆತನನ್ನು ಬಂಧಿಸಲಾಗುವುದು ಎಂದು ಕೋಲಾರದಲ್ಲಿ ಐಜಿ ಸೀಮಂತ್ ಕುಮಾರ್ ಹೇಳಿದರು.
ಕೋಲಾರದ ಎಸ್ಪಿ ಕಚೇರಿಯಲ್ಲಿ ಐಜಿ ಸೀಮಂತ್ ಕುಮಾರ್ ಮಾಧ್ಯಮದವರೊಂದಿಗೆ ಮಾತನಾಡಿ, ವರ್ತೂರ್ ಪ್ರಕಾಶ್ ಅಪಹರಣ ಪ್ರಕರಣ ಸಂಬಂಧ ಆರಂಭದಲ್ಲಿ ಯಾವುದೇ ಮಾಹಿತಿ ಪೊಲೀಸರಲ್ಲಿ ಇರಲಿಲ್ಲ. ಬೆಳ್ಳಂದೂರು ಪೊಲೀಸ್ ಠಾಣೆಯಿಂದ ಕೇಸ್ ಶಿಫ್ಟ್ ಆದ್ಮೇಲೆ ತನಿಖೆ ಆರಂಭಿಸಿಲಾಯಿತು. ಆರೋಪಿಗಳ ಪತ್ತೆಗಾಗಿ 25 ಜನರ ತಂಡ ರಚನೆ ಮಾಡಿ ಮಹಾರಾಷ್ಟ್ರ, ಆಂಧ್ರ, ತಮಿಳುನಾಡು ಹಾಗೂ ಕರ್ನಾಟಕದಲ್ಲಿ ಸುತ್ತಾಡಿ ಒಟ್ಟು ಆರು ಆರೋಪಿಗಳನ್ನು ಪತ್ತೆ ಹಚ್ಚಲಾಗಿದೆ. ಮತ್ತೊಬ್ಬ ಆರೋಪಿ ಎಸ್ಕೇಪ್ ಆಗಿದ್ದಾನೆ ಎಂದು ತಿಳಿಸಿದರು.
ತಮಿಳುನಾಡಿನ ಮಧುರೈನಲ್ಲಿದ್ದ ಎ1 ಆರೋಪಿ ಕವಿರಾಜ್ ಈ ಕೇಸ್ನ ಮುಖ್ಯ ಆರೋಪಿಯಾಗಿದ್ದು, ಇವನ ವಿರುದ್ಧ ತಮಿಳುನಾಡು ಹಾಗೂ ಬೆಂಗಳೂರಿನಲ್ಲಿ 10 ಕೇಸ್ಗಳಿವೆ. ಉಳಿದಂತೆ ಲಿಖಿತ್(20), ಉಲ್ಲಾಸ್(21), ಮನೋಜ್(20), ರಾಘವೇಂದ್ರ(34), ಪ್ರವೀಣ್(20) ಬಂಧಿತರು. ಮತ್ತೊಬ್ಬ ನಾಪತ್ತೆಯಾಗಿದ್ದು, ಶ್ರೀಘ್ರದಲ್ಲಿ ಬಂಧಿಸಲಾಗುವುದು ಎಂದು ಹೇಳಿದರು.