ಕರ್ನಾಟಕ

karnataka

ETV Bharat / state

ವರ್ತೂರ್ ಪ್ರಕಾಶ್ ಕಿಡ್ನ್ಯಾಪ್​ ಪ್ರಕರಣ: ಹಣ ತಂದುಕೊಟ್ಟ ವ್ಯಕ್ತಿಯ ವಿಚಾರಣೆ - Kolar Police investigate continuously

ಮಾಜಿ ಸಚಿವ ಆರ್.ವರ್ತೂರ್ ಪ್ರಕಾಶ್ ಕಿಡ್ನ್ಯಾಪ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪಹರಣಕಾರರಿಗೆ ಹಣ ತಂದು ಕೊಟ್ಟಿದ್ದ ವ್ಯಕ್ತಿ ನಯಾಜ್​ನನ್ನು ವಶಕ್ಕೆ ಪಡೆದ ಗ್ರಾಮಾಂತರ ಠಾಣಾ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ವರ್ತೂರ್ ಪ್ರಕಾಶ್ ಕಿಡ್ನಾಪ್ ಪ್ರಕರಣ
Vartur Prakash Kidnap Case

By

Published : Dec 3, 2020, 1:47 PM IST

Updated : Dec 3, 2020, 2:43 PM IST

ಕೋಲಾರ:ಮಾಜಿ ಸಚಿವ ಆರ್.ವರ್ತೂರ್ ಪ್ರಕಾಶ್ ಕಿಡ್ನ್ಯಾಪ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪಹರಣಕಾರರಿಗೆ ಹಣ ತಂದು ಕೊಟ್ಟ ವ್ಯಕ್ತಿಯನ್ನು ಕೋಲಾರ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಪೊಲೀಸರು ವಶಕ್ಕೆ ಪಡೆದಿರುವ ನಯಾಜ್​ನ ಸಹೋದರ ಮಾಹಿತಿ

ಹಣಕ್ಕಾಗಿ ಮಾಜಿ ಸಚಿವ ಆರ್.ವರ್ತೂರ್ ಪ್ರಕಾಶ್ ಅವರನ್ನು ಕಿಡ್ನ್ಯಾಪ್​ ಮಾಡಲಾಗಿತ್ತು. ಅದರಂತೆ ಕೋಲಾರದ ನಯಾಜ್ ಎಂಬಾತ ತಾಲೂಕಿನ ಕಾಫಿ ಡೇ ಬಳಿ ಅಪಹರಣಕಾರರಿಗೆ ಸುಮಾರು 48 ಲಕ್ಷ ಹಣವನ್ನು ನೀಡಿದ್ದ ಎಂದು ವರ್ತೂರ್ ಪ್ರಕಾಶ್ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ನಯಾಜ್​ನನ್ನು ವಶಕ್ಕೆ ಪಡೆದ ಗ್ರಾಮಾಂತರ ಠಾಣಾ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಪೊಲೀಸರು ವಶಕ್ಕೆ ಪಡೆದಿರುವ ನಯಾಜ್​

ಇನ್ನು ನಯಾಜ್ ಹಸು ವ್ಯಾಪಾರಿಯಾಗಿದ್ದು, ವರ್ತೂರ್ ಪ್ರಕಾಶ್ ಹಾಗೂ ನಯಾಜ್ ಆತ್ಮೀಯವಾಗಿದ್ದರು‌. ಇನ್ನು ಅಪಹರಣ ಪ್ರಕರಣದ ಜಾಡು ಹಿಡಿದು ತನಿಖೆ ಆರಂಭಿಸಿರುವ ಪೊಲೀಸರು, ಹಣವನ್ನು ಯಾರಿಗೆ ಎಷ್ಟು ಕೊಡಲಾಗಿತ್ತು ಎಂಬೆಲ್ಲಾ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ.

ಈ ಕುರಿತು ಮಾತನಾಡಿರುವ ನಯಾಜ್ ಅವರ ಸಹೋದರ ಸಿರಾಜ್, ವರ್ತೂರ್ ಪ್ರಕಾಶ್ ಫೋನಿನ ಮೂಲಕ ಹಣವನ್ನು ತೆಗೆದುಕೊಂಡು ಎಂದು ಹೇಳಿರುವುದು ನಿಜ. ಅಲ್ಲದೆ ಅದರಂತೆ ನರಸಾಪುರ ಬಳಿ ಇರುವ ಕಾಫಿ ಡೇ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಹರಣಕಾರರಿಗೆ ಹಣ ಕೊಡಲಾಯಿತು. ಅಲ್ಲದೆ ಹಸುಗಳ ಮಾರಾಟದಿಂದ ಬಂದಿದ್ದ ಸುಮಾರು 48 ಲಕ್ಷ ಹಣವನ್ನು ಕೊಟ್ಟಿದ್ದು, ಹಣ ಪಡೆದವರು ಯಾರು ಎಂದು ಗೊತ್ತಿಲ್ಲ ಎಂದರು.

Last Updated : Dec 3, 2020, 2:43 PM IST

ABOUT THE AUTHOR

...view details