ಕರ್ನಾಟಕ

karnataka

ETV Bharat / state

ವಾಲ್ಮೀಕಿ ಜಯಂತಿ ಆಚರಣೆ: ಸಂಸದ, ಸಚಿವರಿಂದ ಸಖತ್​ ಸ್ಟೆಪ್ಸ್​​​ - ಮಹರ್ಷಿ ವಾಲ್ಮೀಕಿ ಜಯಂತಿ

ಕೋಲಾರ ನಗರದ ಕೋಟೆಯಲ್ಲಿರುವ ವಾಲ್ಮೀಕಿ ಭವನದಲ್ಲಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು. ಈ ವೇಳೆ ಸಂಸದ ಮುನಿಸ್ವಾಮಿ ಹಾಗೂ ಸಚಿವ ನಾಗೇಶ್​ ಸಖತ್​ ಸ್ಟೆಪ್ಸ್​ ಹಾಕುವ ಮೂಲಕ ಗಮನ ಸೆಳೆದರು.

ಸಖತ್​ ಸ್ಟೆಪ್ಸ್​​​ ಹಾಕಿದ ಸಂಸದ ಹಾಗೂ ಸಚಿವ

By

Published : Oct 13, 2019, 1:11 PM IST

ಕೋಲಾರ:ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಸಂಸದ ಹಾಗೂ ಸಚಿವರು ಕುಣಿದು ಕುಪ್ಪಳಿಸಿದ ಘಟನೆ ನಡೆದಿದೆ.

ನಗರದ ಕೋಟೆಯಲ್ಲಿರುವ ವಾಲ್ಮೀಕಿ ಭವನದ ಬಳಿ ಸ್ಥಬ್ದ ಚಿತ್ರಗಳ ಮೆರವಣಿಗೆಗೆ ಚಾಲನೆ ನೀಡಿದ ಸಂಸದ ಮುನಿಸ್ವಾಮಿ ಹಾಗೂ ಸಚಿವ ನಾಗೇಶ್, ವಾದ್ಯಕ್ಕೆ ತಕ್ಕಂತೆ ಬೊಂಬಾಟ್ ಸ್ಟೆಪ್ಸ್ ಹಾಕಿದ್ರು. ಸಂಸದ ಮುನಿಸ್ವಾಮಿ ವಾದ್ಯದವರೊಂದಿಗೆ ಸೇರಿ ಡೋಲು ಬಾರಿಸುವ ಮೂಲಕ ಕುಣಿದು ಜನರನ್ನು ರಂಜಿಸಿದ್ರು.

ಸಖತ್​ ಸ್ಟೆಪ್ಸ್​​​ ಹಾಕಿದ ಸಂಸದ ಹಾಗೂ ಸಚಿವ

ಸಂಸದ ಹಾಗೂ ಸಚಿವರ ಡ್ಯಾನ್ಸ್​​​ಗೆ ಜನಾಂಗದ ಮುಖಂಡರು ಸಾಥ್ ನೀಡಿದ್ದು, ಅದ್ದೂರಿಯಾಗಿ ವಾಲ್ಮೀಕಿ ಜಯಂತಿ ಆಚರಣೆ ಮಾಡಿದ್ರು. ಮೆರವಣಿಗೆಯಲ್ಲಿ ಸ್ಥಬ್ದ ಚಿತ್ರಗಳು, ಡೊಳ್ಳು ಕುಣಿತ ಸೇರಿದಂತೆ ಅಧಿಕಾರಿಗಳು ಹಾಗೂ ಜನಾಂಗದ ಮುಖಂಡರು ಭಾಗವಹಿಸಿದ್ರು.

ABOUT THE AUTHOR

...view details