ಕರ್ನಾಟಕ

karnataka

ETV Bharat / state

ಮಂಗಳೂರು ಗಲಭೆಗೆ ಖಾದರ್​​​​ ಪ್ರಚೋದನೆ ನೀಡಿದ್ದಾರೆ: ಸಂಸದ ಮುನಿಸ್ವಾಮಿ ಆರೋಪ - ಗದಗನಲ್ಲಿಯೂ ಸಹ ಅಂಜುಮನ್-ಎ-ಇಸ್ಲಾಂ ಕಮಿಟಿ ವತಿಯಿಂದ ಬೃಹತ್ ಪ್ರತಿಭಟನೆ

ಪೌರತ್ವ ತಿದ್ದುಪಡಿ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಯು.ಟಿ.ಖಾದರ್ ಬೆಂಕಿ ಹಚ್ಚುವುದರ ಕುರಿತು ಮಾತನಾಡುವ ಮೂಲಕ ವಿಧ್ವಂಸಕ ಕೆಲಸಕ್ಕೆ ಪ್ರಚೋದನೆ ನೀಡಿದ್ದಾರೆಂದು ಸಂಸದ ಎಸ್.ಮುನಿಸ್ವಾಮಿ ಆರೋಪಿಸಿದ್ದಾರೆ.

KN_KLR_2_MP_AND_MINISTER_AVBB_7205620
ಯು.ಟಿ.ಖಾದರ್ ಬೆಂಕಿ ಹಚ್ಚುವ ಮೂಲಕ ಮಂಗಳೂರು ಗಲಭೆ ಪ್ರಚೋದನೆ ನೀಡಿದ್ದಾರೆ: ಎಸ್. ಮುನಿಸ್ವಾಮಿ ವಾಗ್ದಾಳಿ

By

Published : Dec 24, 2019, 7:13 PM IST

ಕೋಲಾರ\ಗದಗ:ಪೌರತ್ವ ತಿದ್ದುಪಡಿ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಯು.ಟಿ.ಖಾದರ್ ಬೆಂಕಿ ಹಚ್ಚುವುದರ ಕುರಿತು ಮಾತನಾಡುವ ಮೂಲಕ ವಿಧ್ವಂಸಕ ಕೆಲಸಕ್ಕೆ ಪ್ರಚೋದನೆ ನೀಡಿದ್ದಾರೆಂದು ಸಂಸದ ಎಸ್.ಮುನಿಸ್ವಾಮಿ ಆರೋಪಿಸಿದ್ದಾರೆ.

ಪೌರತ್ವ ತಿದ್ದುಪಡಿಯಿಂದಾಗಿ ದೇಶದ ಯಾವುದೇ ಧರ್ಮದವರಿಗೂ ತೊಂದರೆಯಾಗುವುದಿಲ್ಲ. ಕಾಂಗ್ರೆಸ್​​ನವರು ವೋಟ್‍ಗಾಗಿ ಯುವಕರನ್ನ ದುರ್ಬಳಕೆ ಮಾಡಿಕೊಳ್ಳುವುದರ ಮೂಲಕ ಮುಖಕ್ಕೆ ಮಾಸ್ಕ್ ಧರಿಸಿ ಕೃತ್ಯ ಎಸಗುವಂತೆ ಪ್ರೇರೇಪಿಸಿದ್ದಾರೆ ಎಂದು ಆರೋಪಿಸಿದರು. ಪೌರತ್ವ ತಿದ್ದುಪಡಿಯಿಂದಾದರು ನಾವು ಈ ದೇಶದ ಪ್ರಜೆ ಎಂದು ಕಾಂಗ್ರೆಸ್​​ನವರಿಗೆ ಅರಿವಾಗಿದೆ. ಹಿಂದೆ ಪ್ರತಿಭಟನೆಗಳು ನಡೆದರೆ ಪಾಕಿಸ್ತಾನದ ಬಾವುಟಗಳು ಹಾರಾಡುತ್ತಿದ್ದವು. ಇದೀಗ ದೇಶದ ಬಾವುಟಗಳನ್ನ ಹಿಡಿದು ಪ್ರತಿಭಟನೆಗೆ ಮುಂದಾಗಿದ್ದಾರೆ ಎಂದರು.

ಮಂಗಳೂರು ಗಲಭೆಗೆ ಖಾದರ್​​ ಪ್ರಚೋದನೆ ನೀಡಿದ್ದಾರೆ: ಮುನಿಸ್ವಾಮಿ ವಾಗ್ದಾಳಿ

ಇನ್ನು ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ನಾಗೇಶ್ ಮಾತನಾಡಿ, ಮಂಗಳೂರಿನಲ್ಲಿ ಕಿಡಿಗೇಡಿಗಳು ಮಾಡಿರುವ ವಿಧ್ವಂಸಕ ಕೃತ್ಯ ಕುರಿತು ಎರಡು ಹಂತಗಳಲ್ಲಿ ತನಿಖೆ ಪ್ರಾರಂಭಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಪೌರತ್ವ ಕಾಯ್ದೆ ವಿರೋಧಿಸಿ ಗದಗದಲ್ಲಿಯೂ ಸಹ ಅಂಜುಮನ್-ಎ-ಇಸ್ಲಾಂ ಕಮಿಟಿ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು. ನಗರದ ಮುಳಗುಂದ ಬಳಿ ಇರೋ ಶಾಹಿ ಈದ್ಗಾ ಮೈದಾನದಲ್ಲಿ ಆಯೋಜಿಸಿದ್ದ ಶಾಂತಿಯುತ ಪ್ರತಿಭಟನಾ ಕಾರ್ಯಕ್ರಮದಲ್ಲಿ ಮುಸ್ಲಿಂ ಹಾಗೂ ದಲಿತ ಮುಖಂಡರು ಕೇಂದ್ರ‌ ಸರ್ಕಾರ ಜಾರಿಗೆ ತಂದಿರೋ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಂತರ ರಾಷ್ಟ್ರಗೀತೆ ಹಾಡುವ ಮೂಲಕ ಪ್ರತಿಭಟನೆ ಮುಕ್ತಾಯಗೊಳಿಸಲಾಯಿತು.

ABOUT THE AUTHOR

...view details