ಕರ್ನಾಟಕ

karnataka

ETV Bharat / state

ಕೆಂಪೇಗೌಡ ಪ್ರತಿಮೆ ಅನಾವರಣ: ಬಿಜೆಪಿ ವಿರುದ್ಧ ಗೋವಿಂದರಾಜು ವಾಗ್ದಾಳಿ - ಎಂಎಲ್​ಸಿ ಗೋವಿಂದ ರಾಜು

ಮಾಜಿ ಪ್ರಧಾನಿ ದೇವೇಗೌಡರ ಮನೆಗೆ ಹೋಗಿ ಆಹ್ವಾನಿಸಬೇಕಿತ್ತು. ಆದರೆ ಎಲ್ಲರನ್ನು ಕಡೆಗಣಿಸಿ ಬಿಜೆಪಿ ಸರ್ವಾಧಿಕಾರಿ ಧೋರಣೆ ತೋರಿದೆ ಎಂದು ಎಂಎಲ್​ಸಿ ಗೋವಿಂದ ರಾಜು ದೂರಿದ್ದಾರೆ.

MLC Govinda Raju
ಎಂಎಲ್​ಸಿ ಗೋವಿಂದ ರಾಜು

By

Published : Nov 12, 2022, 1:58 PM IST

Updated : Nov 12, 2022, 6:06 PM IST

ಕೋಲಾರ: ಪ್ರಧಾನಿ ನರೇಂದ್ರ ಮೋದಿ ಅವರು ಕೆಂಪೇಗೌಡ ಪ್ರತಿಮೆ ಉದ್ಘಾಟನೆಗೆ ಸಂಬಂಧಿಸಿದಂತೆ, ಕೆಂಪೇಗೌಡ ಪ್ರತಿಮೆ ಉದ್ಘಾಟನಾ ಕಾರ್ಯಕ್ರಮ ಸರ್ಕಾರಿ ಕಾರ್ಯಮವಾಗಿದ್ದು, ಪ್ರೋಟೊ ಕಾಲ್ ಮರೆತು, ಬಿಜೆಪಿಯವರು ಸರ್ವಾಧಿಕಾರಿ ಧೋರಣೆಯನ್ನು ಅನುಸರಿಸಿದ್ದಾರೆ ಎಂದು ಕೋಲಾರದಲ್ಲಿ ಎಂಎಲ್​ಸಿ ಗೋವಿಂದ ರಾಜು ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇಂದು ಕೋಲಾರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಾಜಿ ಪ್ರಧಾನಿ ದೇವೇಗೌಡ ಅವರು ಮಾತ್ರವಲ್ಲ, ನಾನೂ ಒಬ್ಬ ಎಂಎಲ್​ಸಿ ಆಗಿದ್ದು, ನನ್ನನ್ನೂ ಕಾರ್ಯಕ್ರಮಕ್ಕೆ ಆಹ್ವಾನಿಸಬೇಕಾಗಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಎಂಎಲ್​ಸಿ ಗೋವಿಂದ ರಾಜು

ಇನ್ನು, ಹೆಚ್​ ಡಿ ದೇವೇಗೌಡ ಅವರು ಮಾಜಿ ಪ್ರಧಾನಿಗಳಾಗಿದ್ದು ಅವರ ಮನೆಗೆ ಹೋಗಿ ಕಾರ್ಯಕ್ರಮಕ್ಕೆ ಆಹ್ವಾನ ನೀಡಬೇಕಾಗಿತ್ತು. ಆದರೆ ಎಲ್ಲರನ್ನು ಕಡೆಗಣಿಸಿ ಕಾರ್ಯಕ್ರಮ ನಡೆಸುವ ಮೂಲಕ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ. ಕೆಂಪೇಗೌಡ ಅವರು ಯಾವುದೋ ಒಂದು ಪಕ್ಷಕ್ಕೆ ಅಥವಾ ಒಂದು ಜಾತಿಗೆ ಸೀಮಿತರಾಗಿಲ್ಲ. ಹೀಗಾಗಿ ಎಲ್ಲಾ ಶಾಸಕರು, ಎಂಎಲ್​ಸಿಗಳು ಸೇರಿದಂತೆ ಸಂಬಂಧಪಟ್ಟವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಬೇಕಾಗಿತ್ತು. ಆದರೆ ಅದೆಲ್ಲವನ್ನು ಬಿಟ್ಟು ತರಾತುರಿಯಲ್ಲಿ ಕಾರ್ಯಕ್ರಮ‌ ಮಾಡಿದ್ದಾರೆ. ಹೀಗಾಗಿ ಬಿಜೆಪಿಯ ಈ ಸರ್ವಾಧಿಕಾರಿ ಧೋರಣೆಯನ್ನು ಪಕ್ಷಾತೀತವಾಗಿ ಖಂಡಿಸುತ್ತಿರುವುದಾಗಿ ಹೇಳಿದರು.

ಇದನ್ನೂ ಓದಿ:ಕೆಂಪೇಗೌಡ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಹೆಚ್​ಡಿಡಿ ನಿರ್ಲಕ್ಷ್ಯ ಆರೋಪ: ಹೆಚ್‍ಡಿಕೆ ಗರಂ

Last Updated : Nov 12, 2022, 6:06 PM IST

ABOUT THE AUTHOR

...view details