ಕರ್ನಾಟಕ

karnataka

ETV Bharat / state

ತಣ್ಣಗಾಗದ ಗ್ರಾಪಂ ಚುನಾವಣಾ ವೈಷಮ್ಯ.. ಪಂಚಾಯತ್‌ ಅಧ್ಯಕ್ಷನ ಮನೆಗೇ ಬೆಂಕಿ.. - ರಾಜೇಂದ್ರಹಳ್ಳಿ ಗ್ರಾಮಚಾಯಿತಿ

ಉದ್ದೇಶಪೂರ್ವಕವಾಗಿ ಕಿಟಕಿಯಿಂದ ಹುಲ್ಲನ್ನು ಎಸೆದು ಅದಕ್ಕೆ ಬೆಂಕಿ ಹಚ್ಚಿ ವಿಕೃತಿ ಮೆರೆದಿದ್ದಾರೆ. ಇನ್ನು, ಸ್ಥಳಕ್ಕೆ ಮುಳಬಾಗಿಲು ಡಿವೈಎಸ್​​​ಪಿ ಗಿರಿ ಅವರು ಭೇಟಿ ನೀಡಿದ್ದು, ಪರಿಶೀಲಿಸಿದ್ದಾರೆ. ಪೊಲೀಸರು ಗ್ರಾಮದಲ್ಲಿಯೇ ಬೀಡು ಬಿಟ್ಟಿದ್ದು, ನಂಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ..

unknown-who-set-fire-to-the-panchayat-presidents-house
ಪಂಚಾಯಿತಿ ಅಧ್ಯಕ್ಷನ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು

By

Published : Feb 6, 2021, 9:20 PM IST

ಕೋಲಾರ :ಗ್ರಾಮ ಪಂಚಾಯತ್‌ ಚುನಾವಣೆ ಮುಗಿದರೂ ವೈರತ್ವ ಕಡಿಮೆಯಾಗಿಲ್ಲ. ಗೆದ್ದವರು ಮತ್ತು ಸೋತವರ ನಡುವಿನ ದ್ವೇಷ ಮಾತ್ರ ಹಾಗೆಯೇ ಮುಂದುವರೆದಿದೆ.

ಅದರಂತೆ ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ರಾಂಜೇದ್ರಹಳ್ಳಿ ಗ್ರಾಮ ಪಂಚಾಯತ್‌ಗೆ, ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಸದಸ್ಯನ ಮನೆಗೆ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಘಟನೆ ನಡೆದಿದೆ.

ರಾಜೇಂದ್ರಹಳ್ಳಿ ಗ್ರಾಮ ಪಂಚಾಯತ್‌ ಸದಸ್ಯ ನೂರ್ ಜಾನ್ ಎಂಬಾತ ಇಂದು ಪಂಚಾಯತ್‌ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಜೊತೆಗೆ ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಬೆಂಬಲದಿಂದ ಅಧ್ಯಕ್ಷನಾಗಿದ್ದ ನೂರ್ ಜಾನ್ ಎಂಬುವರ ಮನೆಯೊಳಗೆ ಯಾರೂ ಇಲ್ಲದ ಕಾರಣ ಸಂಭವಿಸಬಹುದಾದ ಅನಾಹುತ ತಪ್ಪಿದೆ.

ಉದ್ದೇಶಪೂರ್ವಕವಾಗಿ ಕಿಟಕಿಯಿಂದ ಹುಲ್ಲನ್ನು ಎಸೆದು ಅದಕ್ಕೆ ಬೆಂಕಿ ಹಚ್ಚಿ ವಿಕೃತಿ ಮೆರೆದಿದ್ದಾರೆ. ಇನ್ನು, ಸ್ಥಳಕ್ಕೆ ಮುಳಬಾಗಿಲು ಡಿವೈಎಸ್​​​ಪಿ ಗಿರಿ ಅವರು ಭೇಟಿ ನೀಡಿದ್ದು, ಪರಿಶೀಲಿಸಿದ್ದಾರೆ. ಪೊಲೀಸರು ಗ್ರಾಮದಲ್ಲಿಯೇ ಬೀಡು ಬಿಟ್ಟಿದ್ದು, ನಂಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ:ರೈತರ ಹೋರಾಟ ದಾರಿತಪ್ಪಿದಂತೆ ಕಾಣುತ್ತಿದೆ : ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

ABOUT THE AUTHOR

...view details