ಮಂಗಳೂರು: ಗುರುವಾರ ಸಂಜೆ ಬೆಳ್ತಂಗಡಿಯ ಉಜಿರೆ ರಥಬೀದಿಯಿಂದ ಬಾಲಕನನ್ನು ಅಪಹರಣ ಮಾಡಿದ್ದ ಪ್ರಕರಣ ಕೊನೆಗೂ ಸುಖಾಂತ್ಯ ಕಂಡಿದ್ದು, ಬಾಲಕ ಪಾಲಕರ ಮಡಿಲು ಸೇರಿದ್ದಾನೆ.
ಉಜಿರೆ ಬಾಲಕನ ಕಿಡ್ನಾಪ್ ಕೇಸ್ ಸುಖಾಂತ್ಯ: ಮಗನನ್ನು ಅಪ್ಪಿಕೊಂಡು ಕಣ್ಣೀರು ಹಾಕಿದ ತಾಯಿ - Ujire boy kidnap case: Boy parents get emotional
13:20 December 19
ಉಜಿರೆಯ ಉದ್ಯಮಿ ಬಿಜೋಯ್ ಅವರ ಪುತ್ರ 8 ವರ್ಷದ ಅನುಭವ್ ಕಿಡ್ನಾಪ್ ಪ್ರಕರಣ ಕೊನೆಗೂ ಸುಖಾಂತ್ಯ ಕಂಡಿದೆ.
ಮಂಗಳೂರಿನಲ್ಲಿ ಕಿಡ್ನಾಪ್ ಆಗಿದ್ದ ಬಾಲಕನನ್ನು ಕೋಲಾರದಲ್ಲಿ ಪೊಲೀಸರು ರಕ್ಷಣೆ ಮಾಡಿದ್ದು, ಬಾಲಕ ಸುರಕ್ಷಿತವಾಗಿ ತಾಯಿಯ ಮಡಿಲು ಸೇರಿದ್ದಾನೆ. ಮಾಲೂರು ತಾಲೂಕಿನ ಮಾಸ್ತಿ ಪೊಲೀಸ್ ಠಾಣೆಯಲ್ಲಿ 8 ವರ್ಷದ ಬಾಲಕನ್ನು ಪೊಲೀಸರು ತಂದೆ-ತಾಯಿಗೆ ಒಪ್ಪಿಸಿದರು. ಈ ವೇಳೆ ಮಗ ಅಭಿನವ್ ನನ್ನು ಅಪ್ಪಿಕೊಂಡು ಪೋಷಕರು ಭಾವೋದ್ವೇಗಕ್ಕೆ ಒಳಗಾದ ದೃಶ್ಯ ಕಂಡುಬಂದಿತು.
ಕೋಲಾರದ ಎಸ್ಪಿ ಕಾರ್ತಿಕ್ ರೆಡ್ಡಿ ನೆರವಿನಿಂದ ಮಂಗಳೂರು ಪೊಲೀಸ್ ವಿಶೇಷ ತಂಡ ಈ ಪ್ರಕರಣವನ್ನು ಬೇಧಿಸಿದ್ದು, ಕಿಡ್ನಾಪರ್ಸ್ಗಳನ್ನು ಬಂಧಿಸಲಾಗಿದೆ. ಕೂರ್ನಹೊಸಳ್ಳಿ ಗ್ರಾಮದ ಮಂಜುನಾಥ್ ಎಂಬುವರ ಮನೆಯಲ್ಲಿ ಮಗುವನ್ನು ಇರಿಸಿದ್ದ ಅಪಹರಣಕಾರರು, ಮಗುವಿನ ಪೋಷಕರ ಬಳಿ ಹಣಕ್ಕೆ ಬೇಡಿಕೆ ಇಟ್ಟಿದ್ದರು.
ಓದಿ:ಉಜಿರೆ ಬಾಲಕನ ಅಪಹರಣ ಕೇಸ್; 17 ಕೋಟಿಗೆ ಬೇಡಿಕೆ ಇಟ್ರಾ ಕಿಡ್ನಾಪರ್ಸ್?