ಜನಾಂದೋಲನಾ ವೇದಿಕೆ ಸದಸ್ಯರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕೋಲಾರ:ಹತ್ತಾರು ವರ್ಷಗಳಿಂದ ಸಾವಿರಾರು ರೈತರ ಹಾಗೂ ಹಾಲು ಉತ್ಪಾದಕರ ಶ್ರಮದ ಫಲವಾಗಿ ಕಟ್ಟಿರುವ ಸಹಕಾರಿ ಸಂಸ್ಥೆ. ಆದರೆ, ಅಲ್ಲಿನ ಆಡಳಿತ ಮಂಡಳಿ ಹಾಗೂ ಕೆಲವು ಅಧಿಕಾರಿಗಳು ಒಕ್ಕೂಟದ ಅಭಿವೃದ್ದಿ ಹೆಸರಲ್ಲಿ ನೂರಾರು ಕೋಟಿಗಳ ಅವ್ಯವಹಾರ ಮಾಡಿರುವ ಬಗ್ಗೆ ಸಾಕಷ್ಟು ಆರೋಪಗಳು ಕೇಳಿ ಬರುತ್ತಿವೆ. ಹೀಗಾಗಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಹಕಾರಿ ಸಂಘಗಳ ಜಂಟಿ ನಿಬಂಧಕರಿಗೆ ಜನಾಂದೋಲನಾ ವೇದಿಕೆ ಸದಸ್ಯರು ದೂರು ನೀಡಿ ಆಗ್ರಹಿಸಿದ್ದಾರೆ.
ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಇಂದಿಗೂ ಸಾವಿರಾರು ರೈತ ಕುಟುಂಬಗಳಿಗೆ ಜೀವನಾಡಿಯಾಗಿ ಕಾರ್ಯನಿರ್ವಹಿಸುತ್ತಿದೆ. ರೈತರು ಹಾಗೂ ಹಾಲು ಉತ್ಪಾದಕರ ಶ್ರಮದ ಫಲವಾಗಿ ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಇಂದು ಬೃಹತ್ ಸಂಸ್ಥೆಯಾಗಿ ಬೆಳೆದು ನಿಂತಿದೆ. ಅಲ್ಲದೇ ಇಲ್ಲಿ ನಿತ್ಯ ಹತ್ತು ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಅಷ್ಟೇ ಅಲ್ಲದೆ ಇದೊಂದು ಒಕ್ಕೂಟ ಸಾವಿರಾರು ಜನರಿಗೆ ಉದ್ಯೋಗ ನೀಡುವ ಮೂಲಕ ಜಿಲ್ಲೆಯಲ್ಲಿ ಒಂದು ದೊಡ್ಡ ಸಹಕಾರಿ ಸಂಸ್ಥೆಯಾಗಿ ಬೆಳೆದು ನಿಂತಿದೆ.
ಸದ್ಯ ಇದೇ ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟದಲ್ಲಿ ಅವ್ಯವಹಾರ ಹಾಗೂ ಹಣ ದುರುಪಯೋಗ ಆರೋಪ ಕೇಳಿಬಂದಿದೆ. ಜನಾಂದೋಲನಾ ವೇದಿಕೆ ಸದಸ್ಯರು ಸಹಕಾರಿ ಸಂಘಗಳ ಜಂಟಿ ನಿಬಂಧಕರಿಗೆ ದೂರು ನೀಡಿದ್ದಾರೆ. ಸದ್ಯ ಜನಾಂದೋಲನಾ ಸಮಿತಿ ಸದಸ್ಯರು ಈ ಬಗ್ಗೆ ಕಂಪ್ಲೇಟ್ ಕೊಟ್ಟಿದ್ದಾರೆ.
ಸರ್ಕಾರ ಈ ಕೂಡಲೇ ಅಧ್ಯಕ್ಷರು ಸೇರಿ ಆಡಳಿತ ಮಂಡಳಿಯನ್ನು ವಜಾ ಮಾಡಿ ಆಡಳಿತಾಧಿಕಾರಿ ನೇಮಕ ಮಾಡಬೇಕು. ಅವ್ಯವಹಾರದಲ್ಲಿ ಭಾಗಿಯಾದ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಜನಾಂದೋಲನ ವೇದಿಕೆ ಸದಸ್ಯರು ಆಗ್ರಹಿಸಿದ್ದಾರೆ. ಒಟ್ಟಾರೆ ರೈತರ ಸಹಕಾರಿ ಸಂಸ್ಥೆ ಕೋಲಾರ ಹಾಲು ಒಕ್ಕೂಟದ ಅಭಿವೃದ್ದಿ ಹೆಸರಲ್ಲಿ ನೂರಾರು ಕೋಟಿ ರೂಪಾಯಿ ಹಣವನ್ನು ನಿಯಮ ಬಾಹಿರವಾಗಿ ಬಳಕೆ ಮಾಡಿಕೊಂಡು ಹಾಲು ಒಕ್ಕೂಟಕ್ಕೆ ನಷ್ಟ ಉಂಟಮಾಡಿರುವವರ ವಿರುದ್ದ ತನಿಖೆ ನಡೆಸಬೇಕೆಂದು ಒತ್ತಾಯಿಸಲಾಗಿದೆ.
ಜನಾಂದೊಲನ ವೇದಿಕೆ ಸದಸ್ಯ ಸಿದ್ದಾರ್ಥ ಹೇಳುವುದಿಷ್ಟು?: ಕೋಲಾರ ಚಿಕ್ಕಬಳ್ಳಾಪುರ ಮೆಗಾಡೈರಿಯಲ್ಲಿ ದೊಡ್ಡ ಪ್ರಮಾಣದ ಹಗರಣವಾಗಿದೆ. 56 ಕೋಟಿ ರೂಪಾಯಿ ಸರ್ಕಾರದಿಂದ ಅನುಮೋದನೆ ಪಡೆದು ನಂತರದಲ್ಲಿ ಇನ್ನೂರು ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ. ಸರ್ಕಾರದ ಗಮನಕ್ಕಾಗಲಿ, ಸ್ಥಳೀಯ ಆಡಳಿತ ಮಂಡಳಿ ,ನಿಬಂಧಕರಿರ ಗಮನಕ್ಕೆ ತರದೇ ಒಕ್ಕೂಟಕ್ಕೆ ನಷ್ಟ ಮಾಡಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ತಕ್ಷಣ 68 ಆದೇಶವನ್ನು ಹೊರಡಿಸಿದೆ. ಆದರಂತೆ ಎಂಡಿಗೆ ಕೂಡಲೇ ಅಲ್ಲಿದ್ದ ನಿರ್ದೇಶಕ, ಅಧ್ಯಕ್ಷರನ್ನು ಅವರ ಸ್ಥಾನದಿಂದ ಕೆಳಗಿಳಿಸಿ, ಅನರ್ಹಗೊಳಿಸಬೇಕು. ಹಣವನ್ನು ರಿಕವರಿ ಮಾಡಿಕೊಳ್ಳಲು ಕ್ರಮ ಕೈಗೊಳ್ಳಬೇಕೆಂದು ಹೇಳಿದ್ದರು. ಇದಕ್ಕಾಗಿ 30 ದಿನಗಳ ಕಾಲಾವಕಶವನ್ನು ಉಪನಿಬಂಧಕರು ನೀಡಿದ್ದರು. ಆದರೆ ಈ ಗಡವು ಮುಗಿದಿದ್ದರೂ ಕ್ರಮ ಕೈಗೊಂಡಿಲ್ಲ. ಸರ್ಕಾರ ಕೂಡಲೇ ಆಡಳಿತಾಧಿಕಾರಿ ನೇಮಕ ಮಾಡಿ, ನಷ್ಟವುಂಟು ಮಾಡಿದವರಿಂದ ಹಣ ವಾಪಸ್ ಪಡೆಯಬೇಕು ಎಂದು ಜನಾಂದೋಲನ ವೇದಿಕೆ ಸದಸ್ಯ ಸಿದ್ಧಾರ್ಥ ಒತ್ತಾಯಿಸಿದ್ದಾರೆ.
ಯಾವುದೇ ತನಿಖೆಗೆ ಸಿದ್ದ :ಹಾಲಿ ಅಧ್ಯಕ್ಷ ನಂಜೇಗೌಡ :- ಹಾಲಿ ಅಧ್ಯಕ್ಷರು ಹಾಗೂ ಮಾಲೂರು ಶಾಸಕ ಕೆ ವೈ ನಂಜೇಗೌಡ ಈ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿ, ಜನಾಂದೊಲನ ವೇದಿಕೆ ಸದಸ್ಯರುಹೇಳೋದೆ ಬೇರೆ. ಒಕ್ಕೂಟದಲ್ಲಿ ಯಾವುದೇ ಅವ್ಯವಹಾರ ಆಗಿಲ್ಲ. ಯಾವುದೇ ಅಭಿವೃದ್ದಿ ಕಾರ್ಯ ನಡೆಯುವ ಸಂದರ್ಭದಲ್ಲಿ ಟೆಂಡರ್ ಮೊತ್ತವನ್ನು ಏರಿಕೆ ಮಾಡುವುದು ಸಹಜ. ಅದರಲ್ಲಿ ತಪ್ಪೇನು ಇಲ್ಲ. ಯಾವುದೇ ತನಿಖೆಗೂ ನಾವು ಸಿದ್ದ ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂಓದಿ:ಸಿಎಲ್ಪಿ ಸಭೆಯಲ್ಲಿ ಶಾಸಕರು ಯಾವುದೇ ಅಸಮಾಧಾನ ಹೊರಹಾಕಿಲ್ಲ:ಜಿ ಪರಮೇಶ್ವರ್