ಕರ್ನಾಟಕ

karnataka

ETV Bharat / state

49 ದಿನಗಳ ಕಾಲ ನಿಶ್ಚಿಂತೆಯಿಂದ ಇದ್ದ ಕೋಲಾರ ಜನರಿಗೆ ಶಾಕ್​ ! - kolar latest news

ಈವರೆಗೆ ಕೋಲಾರ ಜಿಲ್ಲೆಯಲ್ಲಿ 11 ಪ್ರಕರಣಗಳು ಖಚಿತವಾಗಿವೆ. ಚೆನ್ನೈನ ತರಕಾರಿ ಮಾರುಕಟ್ಟೆಗೆ ಹೋಗಿ ಬಂದಿದ್ದ ಮುಳಬಾಗಿಲು ತಾಲೂಕಿನ P-1128 ಸೋಂಕಿತ ವ್ಯಕ್ತಿಯ 37 ವರ್ಷದ ಪತ್ನಿಯಲ್ಲಿ ಕೊರೊನಾ ಪಾಸಿಟಿವ್ ದೃಢವಾಗಿದೆ. ಮತ್ತೊಂದು ಬಂಗಾರಪೇಟೆ ಪಟ್ಟಣದ ವಿಜಯನಗರ ನಿವಾಸಿ P1587 ಆದ 42 ವರ್ಷದ ಡ್ರೈವರ್​ಗೆ ಕೊರೊನಾ ವಕ್ಕರಿಸಿದೆ.

two corona case found in Kolar
49 ದಿನಗಳ ಕಾಲ ನಿಶ್ಚಿಂತತೆಯಿಂದ ಇದ್ದ ಕೋಲಾರ ಜನರಿಗೆ ಶಾಕ್​ !

By

Published : May 22, 2020, 9:46 AM IST

Updated : May 22, 2020, 10:13 AM IST

ಕೋಲಾರ: 49 ದಿನಗಳ ಕಾಲ ಹಸಿರು ವಲಯದಲ್ಲಿದ್ದ ಜಿಲ್ಲೆಗೆ ಮಹಾಮಾರಿ ಕೊರೊನಾ ವಕ್ಕರಿಸಿದ್ದು, ನಿನ್ನೆ ‌ಎರಡು ಕರೊನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, ಜಿಲ್ಲೆಯ ಜನ ಭಯಭೀತರಾಗಿದ್ದಾರೆ.

ಈವರೆಗೆ ಕೋಲಾರ ಜಿಲ್ಲೆಯಲ್ಲಿ 11 ಪ್ರಕರಣಗಳು ಖಚಿತವಾಗಿವೆ. ಚೆನ್ನೈನ ತರಕಾರಿ ಮಾರುಕಟ್ಟೆಗೆ ಹೋಗಿ ಬಂದಿದ್ದ ಮುಳಬಾಗಿಲು ತಾಲೂಕಿನ P-1128 ಸೋಂಕಿತ ವ್ಯಕ್ತಿಯ 37 ವರ್ಷದ ಪತ್ನಿಯಲ್ಲಿ ಕೊರೊನಾ ಪಾಸಿಟಿವ್ ದೃಢವಾಗಿದ್ದು, ಮತ್ತೊಂದೆಡೆ ಬಂಗಾರಪೇಟೆ ಪಟ್ಟಣದ ವಿಜಯನಗರ ನಿವಾಸಿ P-1587ಆದ 42 ವರ್ಷದ ಡ್ರೈವರ್​ಗೆ ಕೊರೊನಾ ವಕ್ಕರಿಸಿದೆ.

ಈ ವ್ಯಕ್ತಿಯೂ ಸಹ ಚೆನ್ನೈನ ತರಕಾರಿ ಮಾರುಕಟ್ಟೆಗೆ ಹೋಗಿ ಬಂದಿದ್ದು, ಈತನ ಗಂಟಲು ದ್ರವವನ್ನು ಪಡೆದುಕೊಂಡು ಬಂಗಾರಪೇಟೆ ತಾಲೂಕಿನ ಎಳೇಸಂದ್ರದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಈತನನ್ನು ಕ್ವಾರಂಟೈನ್ ಮಾಡಲಾಗಿತ್ತು. ಪಾಸಿಟಿವ್ ಎಂದು ವರದಿ ಬಂದ ಹಿನ್ನೆಲೆಯಲ್ಲಿ ಕ್ವಾರಂಟೈನ್ ಕೇಂದ್ರದಿಂದ ಕೋಲಾರ ಕೋವಿಡ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಸೋಂಕಿತ ವ್ಯಕ್ತಿ ವಾಸವಿರುವ ವಿಜಯನಗರವನ್ನು ಕಂಟೇನ್ಮೆಂಟ್​ ಝೋನ್ ಎಂದು ಘೋಷಣೆ‌ ಮಾಡಿ ಬ್ಯಾರಿಕೇಡ್​​ಗಳನ್ನು ಹಾಕಲಾಗಿದೆ.

Last Updated : May 22, 2020, 10:13 AM IST

ABOUT THE AUTHOR

...view details