ಕೋಲಾರ:ಸ್ಫೋಟಕ ವಸ್ತು ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಜಿಲ್ಲೆಯ ಕೆಜಿಎಫ್ನ ರಾಬರ್ಟ್ಸನ್ ಪೇಟೆ ಪೊಲೀಸರು ಬಂಧಿಸಿದ್ದಾರೆ. ಇಲ್ಲಿನ ಫೋಟ್ಟೆ ಪಲ್ಲಿ ವ್ಯಾಪ್ತಿಯ ಹೊರವಲಯದಲ್ಲಿ 7 ಕೆಜಿ ಭಾರದ 1.2 ಅಡಿ ಉದ್ದದ ಜರ್ಮನ್ ನಿರ್ಮಿತ ಜೀವಂತ ಸ್ಫೋಟಕ ವಸ್ತುವನ್ನು ಮಾರಾಟಕ್ಕೆ ಯತ್ನ ನಡೆಸಲಾಗಿತ್ತು.
ಜರ್ಮನ್ ನಿರ್ಮಿತ ಸ್ಫೋಟಕ ವಸ್ತು ಮಾರಾಟ ಯತ್ನ: ಕೆಜಿಎಫ್ನಲ್ಲಿ ಇಬ್ಬರ ಬಂಧನ - ಜರ್ಮನಿ ನಿರ್ಮಿತ ಜೀವಂತ ಸ್ಪೋಟಕ ವಸ್ತು ಮಾರಾಟ ಯತ್ನ ಪ್ರಕರಣ
ಕೆಜಿಎಫ್ನ ರಾಬರ್ಟ್ಸನ್ ಪೇಟೆ ಪೊಲೀಸರು ಸ್ಫೋಟಕ ವಸ್ತು ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
![ಜರ್ಮನ್ ನಿರ್ಮಿತ ಸ್ಫೋಟಕ ವಸ್ತು ಮಾರಾಟ ಯತ್ನ: ಕೆಜಿಎಫ್ನಲ್ಲಿ ಇಬ್ಬರ ಬಂಧನ two-arrested-in-attempt-sell-explosive-material-case](https://etvbharatimages.akamaized.net/etvbharat/prod-images/768-512-15532846-thumbnail-3x2-news.jpg)
ಜರ್ಮನ್ ನಿರ್ಮಿತ ಸ್ಫೋಟಕ ವಸ್ತು ಮಾರಾಟ ಯತ್ನ: ಕೆಜಿಎಫ್ನಲ್ಲಿ ಇಬ್ಬರ ಬಂಧನ
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು, ಬಾಲಾಜಿ ಹಾಗೂ ಸುರೇಶ್ ಎಂಬುವರನ್ನು ಬಂಧಿಸಿದ್ದಾರೆ. ಜರ್ಮನ್ ನಿರ್ಮಿತ ಸ್ಫೋಟಕ ಕೆಜಿಎಫ್ನಲ್ಲಿ ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ವಿದೇಶ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ಆರೋಪಿಗಳನ್ನು ತನಿಖೆ ನಡೆಸಲಾಗುತ್ತಿದೆ. ಈ ಬಗ್ಗೆ ರಾಬರ್ಟ್ಸನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಸಿಲಿಕಾನ್ ಸಿಟಿಯಲ್ಲಿ ಹಣದಾಸೆಗೆ ಗರ್ಭಿಣಿ ಹಸುವಿನ ಹತ್ಯೆ: ಮೂವರು ಆರೋಪಿಗಳು ಅಂದರ್