ಕೋಲಾರ: ಯುವಕನೋರ್ವನ ಅಶ್ಲೀಲ ವಿಡಿಯೋ ಇಟ್ಟುಕೊಂಡು ಆತನಿಗೆ ಬೆದರಿಕೆ ಹಾಕಿ ಹಣ ವಸೂಲಿ ಮಾಡುತ್ತಿದ್ದ ಗ್ಯಾಂಗ್ನ ಇಬ್ಬರು ಆರೋಪಿಗಳು ಕೋಲಾರ ಗ್ರಾಮಾಂತರ ಠಾಣಾ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಡಿಎಸ್ಎಸ್ ಸಂಘಟನೆ ಮುಖಂಡ ಸೇರಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕೋಲಾರ ನಗರದ ಆಟೋ ಶಂಕರ್ ಮತ್ತು ಡಿ.ಎಂ ಮುನಿರಾಜು ಬಂಧಿತರು. ಮತ್ತೋರ್ವ ಆರೋಪಿ ಮುನಿರೆಡ್ಡಿ ಪರಾರಿಯಾಗಿದ್ದಾನೆ.
ಇತ್ತೀಚೆಗೆ ಯುವಕನೋರ್ವನ ಅಶ್ಲೀಲ/ಖಾಸಗಿ ವಿಡಿಯೋ ಹಿಡಿದುಕೊಂಡು ಬೆದರಿಸಿ ಒಂದು ಲಕ್ಷ ರೂಪಾಯಿ ವಸೂಲಿ ಮಾಡಿದ್ದು, ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟಿದ್ದರು. ಹೀಗಾಗಿ ನೊಂದ ಯುವಕನಿಂದ ದೂರು ದಾಖಲಿಸಿಕೊಂಡ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ಅವರಿಂದ ಒಂದು ನಕಲಿ ಪಿಸ್ತೂಲ್ ಅನ್ನು ವಶಕ್ಕೆ ಪಡೆಯಲಾಗಿದೆ.